ಶಿವಮೊಗ್ಗ,ಡಿ.೮: ಎಂಪಿಎA ನೆಡುತೋಪು ಖಾಸಗೀಕರಣ ವಿರೋಧಿಸಿ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುತ್ತಿಗೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ಸಂದರ್ಭ ಮುತ್ತಿಗೆ ಕಾರ್ಯಕ್ರಮ ಸರಿಯಲ್ಲ ಎಂದು ಪೊಲೀಸ್ ಅಧಿಕಾರಿಗಳು ಕೇಳಿಕೊಂಡ ಹಿನ್ನೆಲೆಯಲ್ಲಿ ಹೋರಾಟ ಮುಂದೂಡಲಾಗಿದೆ. ಆದರೆ ನಗರದಲ್ಲಿ ಪರಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಹೋರಾಟದ ದಿನಾಂಕ ಗೊತ್ತುಪಡಿಸುವುದಾಗಿ ನಮ್ಮೂರಿಗೆ ಅಕೇಶಿಯಾ ಬೇಡ ಅಂದೋಲನದ ಮುಖ್ಯಸ್ಥ ಕೆ.ಪಿ.ಶ್ರೀಪಾಲ್ ತಿಳಿಸಿದ್ದಾರೆ.
previous post
next post