Malenadu Mitra
ರಾಜ್ಯಶಿವಮೊಗ್ಗ

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಶಿವಮೊಗ್ಗ : ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಡಿ.ಸಿ. ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿ ಧರಣಿನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ೨೦೦೫ರಲ್ಲಿ ಜಾರಿಗೆ ಬಂದಿದ್ದು, ಅಂದಿನ ಪ್ರಧಾನಿ ಡಾ.ಮನ್‌ಮೋಹನ್‌ಸಿಂಗ್ ಹಾಗೂ ಯುಪಿಎ ಅಧ್ಯಕ್ಷರಾದ ಸೋನಿಯಾಗಾಂಧಿಯವರ ಕನಸಿನ ಯೋಜನೆಯಾಗಿದ್ದು, ಗ್ರಾಮೀಣ ಬಡ ಕುಟುಂಬಗಳಿಗೆ ೧೦೦ ದಿನಗಳ ಉದ್ಯೋಗ ಒದಗಿಸುವ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಶೇ.೯೦ ರಾಜ್ಯ ಸರ್ಕಾರ ಶೇ.೧೦ರ ಅನುದಾನದೊಂದಿಗೆ ಅನುಷ್ಟಾನಗೊಂಡಿತ್ತು. ಈ ಯೋಜನೆಯಡಿ ರಸ್ತೆ, ನೆಡುತೋಪು, ನೀರಾವರಿ ಕಾಮಗಾರಿ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಜೋವನೋಪಾಯ ಹೆಚ್ಚಿಸಲು ಅನುಕೂಲವಾಗಿತ್ತು. ಆದರೆ ಈಗ ಮೀದಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದ ಮೇಲೆ ಅದನ್ನು ವಿಬಿ ಗ್ರಾಮ್ ಜಿ ಎಂದು ನಾಮಕರಣ ಮಾಡುವುದರ ಮೂಲಕ ಗಾಂಧಿ ಹೆಸರು ಕೈಬಿಟ್ಟಿದೆ. ಮತ್ತು ಅದು ಕೇಂದ್ರ ಸರ್ಕಾರದ ಅಣತಿಯಂತೆ ಕೇಂದ್ರ ಆರಿಸಿದ ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ.


ಅಧಿಕಾರ ವಿಕೇಂದ್ರೀಕರಣ ಹಾಗೂ ಒಕ್ಕೂಟ ವ್ಯವಸ್ಥೆಯ ಮೇಲೆ ಸರ್ಜಿಕಲ್ ಸ್ಟ್ರೈಕ್ ಎಂಬಂತೆ ಕ್ರಿಯಾಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಮಾಸ್ಟರ್‌ಪ್ಲ್ಯಾನ್ ಅನ್ವಯವೇ ಗ್ರಾಮ ಪಂಚಾಯ್ತಿಗಳು ರೂಪಿಸಬೇಕು. ಪೂರ್ವ ನಿರ್ಧಾರಿತ ೬೦ ದಿನ ಇಡೀ ಯೋಜನೆಗೆ ನಿರ್ಬಂಧವಿದ್ದು, ಇದು ಕಾರ್ಮಿಕರ ಬೇಡಿಕೆಗೆ ಉದ್ಯೋಗಕತ್ತರಿ ವ್ಯವಸ್ಥೆಯಾಗಿದೆ. ಈ ಯೋಜನೆಯಲ್ಲಿ ಗುತ್ತಿಗೆದಾರರು ಪರೋಕ್ಷವಾಗಿ ಒಳಬರುವ ಅವಕಾಶವಿದ್ದು, ಹಿಂಬಾಗಿಲಿನ ಪ್ರವೇಶ ಸಾಧ್ಯತೆ ಸೃಷ್ಟಿಸಲಾಗಿದೆ. ಜಟಿಲವಾದ ತಾಂತ್ರಿಕ ವ್ಯವಸ್ಥೆಗಳ ಹೇರಿಕೆಯಿಂದ ಉದ್ಯೋಗಾವಕಾಶ ವಂಚಿಸುವ ಯತ್ನ ಮಾಡಲಾಗಿದೆ. ಪಂಚಾಯ್ತಿಗಳಿಗೆ ನಿಯಮಾತ್ಮಕ ಹಂಚಿಕೆ ಅನ್ವಯ ಅನುದಾನ ಹಂಚಿಕೆ ಕೇಂದ್ರ ಮಾಡಲಿದ್ದು, ಹೆಚ್ಚುವರಿ ಖರ್ಚು ಬಂದರೆ ಕೇಂದ್ರ ಹಣ ನೀಡುವುದಿಲ್ಲ.


ಗ್ರಾ.ಪಂ.ಗಳ ಯಾವುದೇ ಕೆಲಸದ ಯೋಜನೆ ಕೇಂದ್ರ ಸರ್ಕಾರ ನಿಗಧಿಪಡಿಸಿದ ಮಾಸ್ಟರ್‌ಪ್ಲಾನ್ ಒಳಗೆ ಇರಬೇಕಾಗಿದ್ದು, ಗ್ರಾ.ಪಂ. ಸಭೆ ಹಾಗೂ ಪಂಚಾಯ್ತಿಗಳಿಗೆ ಅವಶ್ಯವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ಮೊಟಕುಗೊಳಿಸಿದ್ದು, ವೇತನ ದರಗಳನ್ನು ಕನಿಷ್ಠವೇತನ ಅಥವಾ ಬೆಲೆ ಏರಿಕೆಗೆ ಅವಕಾಶವಿಲ್ಲದಂತೆ ನಿಗಧಿಪಡಿಸಿದೆ. ನೂತನ ಮಂಡಳಿ ಮತ್ತು ಸ್ಟೀರಿಂಗ್ ಸಮಿತಿಗಳಿಗೆ ಅಸ್ಪಷ್ಟ ಅಧಿಕಾರ ನೀಡಲಾಗಿದ್ದು, ಎಸ್‌ಟಿ, ಓಬಿಸಿ, ಎಸ್ಸಿ ಸಮುದಾಯಗಳ ಕಡ್ಡಾಯ ಪ್ರಾತಿನಿದ್ಯತೆ ಅಧಿಕಾರ ರದ್ದುಗೊಳಿಸಲಾಗಿದ್ದು, ಕೇಂದ್ರ ಸರ್ಕಾರ ನಿಗಧಿಪಡಿಸುವ ಅನುದಾನದಲ್ಲಿ ೪೦ರಷ್ಟು ಹಣವನ್ನು ರಾಜ್ಯವೇ ಭರಿಸಬೇಕಾಗಿದ್ದು, ಯೋಜನೆ ಜಾರಿಯಲ್ಲಿ ಅಧಿಕಾರ ಇಲ್ಲದಿದ್ದರೂ ರಾಜ್ಯಗಳ ಹಾಗೂ ಪಂಚಾಯ್ತಿ ಮೇಲೆ ಕೇಂದ್ರದಿಂದ ಆರ್ಥಿಕ ಹೊರೆ ಹೇರಿಕೆಯಾಗಿದೆ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ತಿಳಿಸಿದ್ದು, ವಿಬಿ ರಾಮ್-ಜಿ ಕಾಯ್ದೆಯಿಂದ ದುಷ್ಪರಿಣಾಮ ಉಂಟಾಗಿದ್ದು, ಈ ಯೋಜನೆ ರದ್ದುಮಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನೇ ಪುನರ್ ಸ್ಥಾಪಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್.ಪ್ರನಸ್ನಕುಮಾರ್, ಜವಳಿ ನಿಗಮದ ಅಧ್ಯಕ್ಷ ಕೆ. ಚೇತನ್, ಕಾಂಗ್ರೆಸ್ ಪ್ರಮುಖರಾದ ಇಸ್ಮಾಯಿಲ್ ಖಾನ್, ಎನ್.ರಮೇಶ್, ಕಲಗೋಡು ರತ್ನಾಕರ್, ಹೆಚ್.ಸಿ. ಯೋಗೀಶ್, ಖಲೀಂಪಾಷಾ, ಶಿವಕುಮಾರ್, ರವಿಕುಮಾರ್, ಜಿ.ಡಿ. ಮಂಜುನಾಥ್, ಶ್ವೇತಾಬಂಡಿ, ಸ್ಟೇಲ್ಲಾ ಮಾರ್ಟಿನ್, ಎಸ್.ಟಿ. ಚಂದ್ರಶೇಖರ್, ಶಿ.ಜು.ಪಾಶ, ಜಿ.ಪದ್ಮನಾಭ, ಧೀರರಾಜ್ ಹೊನ್ನವಿಲೆ, ವಿಜಯಲಕ್ಷ್ಮೀ ಸಿ. ಪಾಟೀಲ್, ವಿಶ್ವಾನಾಥ್ ಕಾಶೀ, ಭಾರತೀ ರಾಮಕೃಷ್ಣ, ಸುವರ್ಣಾ ನಾಗರಾಜ್, ಅರ್ಚನಾ ಸೇರಿದಂತೆ ಹಲವರಿದ್ದರು.

Ad Widget

Related posts

ಬೆಜ್ಜವಳ್ಳಿ ಬಳಿ ಭೀಕರ ಅಪಘಾತ- ವಿದ್ಯಾರ್ಥಿ ಸ್ಥಳದಲ್ಲೇ ಸಾವು

Malenadu Mirror Desk

ಅಭಿವೃದ್ಧಿ ಮತ್ತು ಸೌಹಾರ್ದ ಶಿವಮೊಗ್ಗ ನಮ್ಮ ದ್ಯೇಯ

Malenadu Mirror Desk

ಜೀವ ಕಾಯ್ವ ವೈದ್ಯರೇ ನಿಮಗೆ ನಮೋ..ನಮಃ…

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.