Malenadu Mitra
ಜಿಲ್ಲೆಶಿವಮೊಗ್ಗಸೊರಬ

ಲೋಕಾಯುಕ್ತ ದಾಳಿ: ಪಿಡಿಓ ಈಶ್ವರಪ್ಪ ಅರೆಸ್ಟ್

ಶಿವಮೊಗ್ಗ: ಇ-ಖಾತೆ ಮಾಡಿಕೊಡಲು 5 ಸಾವಿರ ಲಂಚ ಪಡೆಯುತ್ತಿದ್ದ ಇಂಡುವಳ್ಳಿ ಗ್ರಾ.ಪಂ ನ ಪ್ರಭಾರ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಸೊರಬ ತಾಲೂಕಿನ ಇಂಡುವಳ್ಳಿ ಗ್ರಾ.ಪಂ ನ ಪ್ರಭಾರ ಪಿಡಿಓ ಈಶ್ವರಪ್ಪರನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣ ಸಹಿತ ವಶಕ್ಕೆ ಪಡೆದಿದ್ದಾರೆ.
ಸೊರಬ ತಾಲೂಕಿನ ಇಂಡುವಳ್ಳಿಯ ಮಹಮ್ಮದ್ ಗೌಸ್ ಎಂಬುವರ ದೂರಿನ ಮೇರೆಗೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಹಮ್ಮದ್ ಗೌಸ್ ರ ತಂದೆ ಭಾಷಾ ಸಾಬ್‌ ಅವರು ಇಂಡುವಳ್ಳಿ ಗ್ರಾಮದ ಜಮೀನಿನಲ್ಲೇ ಮನೆ ಮಾಡಿಕೊಂಡು, ವಾಸವಿದ್ದಾರೆ. ಆ ಮನೆಯ ಮೇಲೆ ಲೋನ್ ತೆಗೆದುಕೊಳ್ಳುವ ಸಂಬಂಧ ಮನೆ ಇರುವ ಜಾಗವನ್ನು ತನ್ನ ತಾಯಿಯ ಹೆಸರಿಗೆ ಈ-ಖಾತಾ ಮಾಡಿಕೊಡಲು ಇಂಡುವಳ್ಳಿ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಇಂಡುವಳ್ಳಿ ಗ್ರಾಮದ ಪ್ರಭಾರ ಪಿಡಿಓ ಈಶ್ವರಪ್ಪ ಅವರು ಮನೆ ಜಾಗಕ್ಕೆ ಬಂದು, ಅಳತೆ ಮಾಡಿಕೊಂಡು ಸಹ ಹೋಗಿದ್ದರು. ಆದರೆ, ಈ-ಖಾತಾ ಕೊಡುವಂತೆ ಹಲವು ಬಾರಿ ಕೇಳಿದ್ದರೂ, ಈ ಖಾತೆ ಕೊಡದೇ ಈಶ್ವರಪ್ಪ ಸತಾಯಿಸಿದ್ದರಲ್ಲದೇ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅದರಂತೆ ಇಂದು ಬೆಳಿಗ್ಗೆ ಸೊರಬದ ಪೋಸ್ಟ್ ಆಫೀಸ್ ಕಛೇರಿ ಬಳಿ 5 ಸಾವಿರ ರೂ. ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪಿಡಿಓ ಈಶ್ವರಪ್ಪರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ಲೋಕಾಯುಕ್ತ ಶಿವಮೊಗ್ಗ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್ ನೇತೃತ್ವದಲ್ಲಿ ದಾಳಿ ಕೈಗೊಳ್ಳಲಾಗಿತ್ತು.

Ad Widget

Related posts

ಪತ್ರಿಕಾ ಅಕಾಡೆಮಿಗೆ ಗೋಪಾಲ್ ನೇಮಕ

Malenadu Mirror Desk

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ಕೊರೊನ ಪ್ರಕರಣ

Malenadu Mirror Desk

ಹರ್ಷ ಕೊಲೆ ಆರೋಪಿಗಳ ಹಿನ್ನೆಲೆ ಏನು , ಯಾರ ಪಾತ್ರ ಏನಿತ್ತು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.