ಜೆಡಿಎಸ್ ನಿಷ್ಕ್ರೀಯ ತಾಲ್ಲೂಕ್ ಅಧ್ಯಕ್ಷರ ವಜಾಕ್ಕೆ ಹೆಚ್.ಡಿ.ಕುಮಾರಸ್ವಾಮಿಗೆ ಮನವಿ”
ರಿಪ್ಪನ್‍ಪೇಟೆ;-ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ನಿಷ್ಕ್ರೀಯರಾಗಿದ್ದು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಈ ತಕ್ಷಣ ಅಧ್ಯಕ್ಷರನ್ನು ವಜಾಗೊಳಿಸಿ ಕ್ರಿಯಾಶೀಲ ಅಧ್ಯಕ್ಷರನ್ನು ನೇಮಕ ಮಾಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮನವಿ ಮೂಲಕ ಜಿಲ್ಲಾ ಜೆಡಿಎಸ್ ಮುಖಂಡ ಮುಡುಬ ಧರ್ಮಪ್ಪ ಅಗ್ರಹಿಸಿದ್ದಾರೆ.
ರಿಪ್ಪನ್‍ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ಈಗಾಗಲೇ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷರ ವಿರುದ್ದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮನವಿ ಪತ್ರವನ್ನು ಕಳುಹಿಸುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಸಂಘಟನೆ ಮಾಡಿಕೊಂಡಿದ್ದ ಹೊಸನಗರ ತಾಲ್ಲೂಕ್ ಈಗ ಕಾರ್ಯಕರ್ತರಿಲ್ಲದೆ ಖಾಲಿ ಮನೆಯಾಗಿದ್ದು ಇದಕ್ಕೆ ಮೂಲ ನಿಷ್ಕ್ರೀಯ ಅಧ್ಯಕ್ಷ ಜಯರಾಂ ಕಾರಣರಾಗಿದ್ದು ಯಾವುದೇ ರೈತ ಪರ ಹೋರಾಟ ಪಕ್ಷ ಸಂಘಟನೆ ಇಲ್ಲದ ಕಾರಣ ವರ್ಷಕ್ಕೆ ಒಂದು ಸಾರಿ ಪಕ್ಷದ ಮೀಟಿಂಗ್ ಕರೆಯದೆ ಇರುವುದರಿಂದ ಈ ಕೂಡಲೇ ತಾಲ್ಲೂಕ್ ಅಧ್ಯಕ್ಷರನ್ನು ವಜಾ ಮಾಡಿ ಸಂಭವನ್ಮಾಕ ಚತುರರನ್ನು ನೇಮಕ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿರುವುದಾಗಿ ವಿವರಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ದಿನೇ ದಿನೇ ಸಂಘಟನೆಯನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಗೆ ಈ ಹಿಂದೆ ಪಕ್ಷ ಸಂಘಟನೆಯಲ್ಲಿ ಮುಂಚೊಣಿಯಲ್ಲಿದ್ದ ಎಂ.ಶ್ರೀಕಾಂತ್ ಅಥವಾ ಹೊಸನಗರ ತಾಲ್ಲೂಕ್ ಮಾಜಿ ಅಧ್ಯಕ್ಷ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅರ್.ಎ.ಚಾಬುಸಾಬ್,ಜಿಲ್ಲಾ ಯುವ ಜನತಾದಳ ಅಧ್ಯಕ್ಷರಾದ ಅಯನೂರು ಶಿವನಾಯ್ಕ್ರನ್ನಾಗಲಿ ಅಧ್ಯಕ್ಷರನ್ನಾಗಿ ಮಾಡಿ ಮುಮಬರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ರಾಷ್ಟ್ರೀಯಾಧ್ಯಕ್ಷ ಹೆಚ್.ಡಿ.ದೇವೆಗೌಡರನ್ನು ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಜಿಲ್ಲಾ ಜೆಡಿಎಸ್ ಮುಖಂಡ ಮುಡುಬ ಧರ್ಮಪ್ಪ ಒತ್ತಾಯಿಸಿದ್ದಾರೆ.