ಮಲೆನಾಡಿನ ಖ್ಯಾತ ಉದ್ಯಮಿ ಕಿಮ್ಮನೆ ಜಯರಾಂ ಅವರ ಕಚೇರಿ ಹಾಗೂ ಮನೆಗಳ ಮೇಲೆ ಶುಕ್ರವಾರ ರಾತ್ರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಡಕೆ ಮಂಡಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಜಯರಾಂ ಶಿವಮೊಗ್ಗದ ಹೆಸರಾಂತ ಉದ್ಯಮಿಯಾಗಿದ್ದಾರೆ.
ಇತ್ತೀಚೆಗಷ್ಟೆ ತಾವರೆಕೊಪ್ಪ ಸಮೀಪ ಮಲೆನಾಡಿನ ಪ್ರಥಮ ಗಾಲ್ಫ್ ಕ್ಲಬ್ ಹಾಗೂ ರೆಸಾರ್ಟ್ಅನ್ನು ಜಯರಾಂ ಆರಂಭಿಸಿದ್ದರು. ಇದರ ಉದ್ಘಾಟನೆಗೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಸಿಎಂ ಬಂದು ಹೋದ ಒಂದು ವಾರದಲ್ಲಿಯೇ ಜಯರಾಂ ಕಚೇರಿ ಹಾಗೂ ಮನೆ ಮೇಲೆ ಐಟಿ ದಾಳಿ ನಡೆದಿರುವುದು ತೀವ್ರ ಚರ್ಚೆಗೊಳಗಾಗಿದೆ.
previous post