ಶಿರಸಿ ಜಿಲ್ಲೆಗೆ ಆಗ್ರಹಿಸಿ ಶಿರಸಿ ಜಿಲ್ಲಾ ಹೋರಾಟ ಸಮಿತಿ ಪಂಜಿನ ಮೆರವಣಿಗೆ ನಡೆಸಿದರು. ಅಯ್ಯಪ್ಪಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆಯು ತಿಮ್ಮಪ್ಪನಾಯ್ಕ ಸರ್ಕಲ್.ರಾಜಮಾರ್ಗ, ಭಗತ್ ಸಿಂಗ್ ಸರ್ಕಲ್, ಜೋಗ ಮಾರ್ಗದಲ್ಲಿ ಮೆರವಣಿಗೆ ನಡೆಸಲಾಯಿತು. ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ೩೭ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಮುಂದೆಯೂ ನಿರಂತರ ಹೋರಾಟ ಮುಂದುವರಿಯುತ್ತದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿರುವುದರಿಂದ ಘಟ್ಟದ ಮೇಲಿನವರಿಗೆ ತೊಂದರೆಯಾಗುತ್ತದೆ ಇದನ್ನು ಸರಕಾರ ಹಾಗೂ ಜನಪ್ರತಿನಿಧಿಗಳು ಗಮನಿಸಬೇಕು ಎಂದು ಹೇಳಿದರು.
ಸಿದ್ದಾಪುರ ತಾಲೂಕು ಅಧ್ಯಕ್ಷ ಸಿಎಸ್.ಗೌಡರ, ವಾಸುದೇವ ಬೀಳಗಿ,ಪಿ.ಬಿ.ಹೊಸೂರ,ಗುರುರಾಜ ಶಾನುಭಾಗ್, ಜಿ.ಜಿಹೆಗಡೆ, ಶಿವಾನಂದ ಹೊನ್ನೇಗುಂಡಿ, ಶಂಕರಮೂರ್ತಿ ಮತ್ತಿತರರು ಭಾಗವಹಿಸಿದ್ದರು.
next post