ಶಿವಮೊಗ ಸಮೀಪದ ಸಕ್ರೇಬೈಲಿನ ೮೫ ವರ್ಷದ ಆನೆ ಗೀತಾ ವಯೋ ಸಹಜ ಸಾವುಕಂಡಿದೆ. ೧೫ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾ ಭಾನುವಾರ ಬೆಳಿಗ್ಗೆ ಸುಮಾರು ೪-೩೦ ರ ವೇಳೆಗೆ ಕೊನೆಯುಸಿರೆಳೆಯಿತು. ೧೫ ದಿನಗಳಿಂದ ನಡಿಗೆ ಹಾಗೂ ಆಹಾರ ಸೇವನೆ ಕಡಿಮೆ ಮಾಡಿದ್ದ ಗೀತಾ ಶನಿವಾರ ರಾತ್ರಿ ಕುಸಿದು ಬಿದ್ದಿತ್ತು. ವೈದ್ಯ ಡಾ.ವಿನಯ್ ಸೂಕ್ತ ಚಿಕಿತ್ಸೆ ನೀಡಿದ್ದರೂ, ಫಲಕಾರಿಯಾಗಲಿಲ್ಲ. ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸುಮಾರು ೭ ಬಾರಿ ಗೀತಾ ಆನೆ ಭಾಗವಹಿಸಿತ್ತು. ಆನೆಬಿಡಾರದ ಸಂತಾನ ವೃದ್ಧಿಗೆ ಗೀತಾ ಪಾತ್ರವಿದೆ. ೭ ಮರಿಗಳನ್ನು ಅದು ಹಾಕಿತ್ತು. ಇಲ್ಲಿನ ರಂಗ, ನೇತ್ರಾ ಹಾಗೂ ಆಲೆ ಕೂಡಾ ಗೀತಾ ಆನೆಯ ಕುಡಿಗಳು. ರಂಗ ಇತ್ತೀಚೆಗಷ್ಟೇ ಕಾಡಾನೆಯೊಂದಿಗೆ ಕಾದಾಡಿ ಸಾವಿಗೀಡಾಗಿದೆ. ಗೀತಾ ಸಾವಿನಿಂದ ಸಕ್ರೆಬೈಲ್ ಆನೆಬಿಡಾರದ ಆನೆಗಳ ಸಂಖ್ಯೆ ೨೨ ಕ್ಕಿಳಿದಿದೆ.
previous post
next post