Malenadu Mitra
ಶಿವಮೊಗ್ಗ

ಕೈದಿಗಳಿಗೆ ಆರೋಗ್ಯ ತಪಾಸಣೆ


ಶಿವಮೊಗ್ಗರೋಟರಿ ಪೂರ್ವ ಸಂಸ್ಥೆ ಹಾಗೂ ಸಂಗಮ್ ಹೆಲ್ತ್ ಕೇರ್ ಆಸ್ಪತ್ರೆಗಳ ಸಹಯೋಗದಲ್ಲಿ ಭಾನುವಾರ ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಸುಮಾರು ೨೨೦ ಕೈದಿಗಳು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಔಷಧಿ ಮತ್ತು ಸಲಹೆ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಜೈಲಿನ ಮುಖ್ಯ ಅಧೀಕ್ಷಕ ಡಾ.ರಂಗನಾಥ್, ಎಎಸ್ ಶಿವಾನಂದಶಿವಪುರೆ, ಜೈಲರ್ ಗಳಾದ ಅನಿಲ್‌ಕುಮಾರ್ ಎಸ್.ಎಸ್. ಮಹೇಶ್, ರೋಟರಿ ಸಂಸ್ಥೆಯ ವಿಜಯ್‌ಕುಮಾರ್, ವಸಂತ್, ಮಂಜುನಾಥ್ ಕದಂ, ಅರುಣ್ ಧೀಕ್ಷಿತ್ ಭಾಗಹಿಸಿದ್ದರು. ವೈದ್ಯರಾದ ಡಾ.ವರುಣ್, ಡಾ.ಚರಣ್, ಡಾ.ರಶ್ಮಿ, ಡಾ. ಅನುಷಾ ,ಡಾ. ದ್ಯಾಮನಗೌಡ ತಂಡ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ್ದರು.

Ad Widget

Related posts

ರಾಜರತ್ನನಿಗೆ ಶಿವಮೊಗ್ಗ ಜನರ ಭಾವುಕ ನಮನ, ಸದ್ಭಾವನ ಟ್ರಸ್ಟ್ ನಿಂದ ಯಶಸ್ವೀ ಅಪ್ಪು-ಅಮರ ಕಾರ್ಯಕ್ರಮ

Malenadu Mirror Desk

ಜನನಾಯಕನಿಗೆ ಆತ್ಮೀಯ ಅಭಿನಂದನೆ, ಕಾಗೋಡು ತಿಮ್ಮಪ್ಪರಿಗೆ ಶಿವಮೊಗ್ಗದಲ್ಲಿ ಹೃದಯ ಸ್ಪರ್ಶಿ ಸನ್ಮಾನ

Malenadu Mirror Desk

ಡ್ರಗ್ಸ್ ನಿಯಂತ್ರಣಕ್ಕೆ ಬಿಜೆಪಿ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.