ಶಿವಮೊಗ್ಗ ನಗರದಲ್ಲಿರುವ ಶಿವಮೊಗ್ಗ ಒನ್ ಕಚೇರಿಯ ಸಮರ್ಪಕ ನಿರ್ವಹಣೆಗೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಖಾಸಗಿ ಬಸ್ ನಿಲ್ದಾಣದ ಮೇಲ್ಮಹಡಿಯಲ್ಲಿರುವ ಶಿವಮೊಗ್ಗ ಒನ್ ಕೆಳಗಿನ ಮೆಟ್ಟಿಲುಗಳ ಬಳಿ ಮೂತ್ರವಿಸರ್ಜ£, ಕಸ ಕಡ್ಡಿಗಳಿಂದ ಗಬ್ಬೆದ್ದು ಹೋಗಿದೆ. ಕಚೇರಿಗೆ ಹೋಗುವವರು ಕೊಳಕು ತುಳಿದುಕೊಂಡು ಹೋಗಬೇಕಾಗಿದೆ. ಬಸ್ ನಿಲ್ದಾಣ ಕೂಡಾ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತಿದ್ದು, ಅದರ ಸ್ವಚ್ಚತೆ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಲಕ್ಷö್ಯದಿಂದ ಸಾರ್ವಜನಿಕ ಸೇವೆ ಕೊಡುವ ಕಚೇರಿಯು ಕೊಳಕು ವಾತಾವರಣದಲ್ಲಿದೆ. ಬೆಂಗಳೂರಿನ ಸಂಸ್ಥೆಗೆ ಸ್ವಚ್ಛತೆ ವಹಿಸಿಕೊಟ್ಟಿದ್ದು, ಅದರ ನಿರ್ಲಕ್ಷö್ಯದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗಿಶ್ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್ಕ, ಶಮೀರ್ ಖಾನ್, ಯಮುನಾ ರಂಗೇಗೌಡ, ಮೆಹಕ್ ಷರೀಫ್ ಹಾಗೂ ಪ್ರಮುಖರಾದ ಕೆ.ರಂಗನಾಥ್, ರಂಗೇಗೌಡ , ಪವನ್ ಮತ್ತಿತರರು ಭಾಗವಹಿಸಿದ್ದರು.
previous post
next post