Malenadu Mitra
ಬೇಸಾಯ ರಾಜ್ಯ

ಉಪವಾಸ ಕೈಬಿಡಲು ಸಂಸದ ರಾಘವೇಂದ್ರ ಮನವಿ

ಶಿಕಾರಿಪುರದ ಮೂರು ಹೋಬಳಿಗೆ ನೀರುಣಿಸುವ ಮಹತ್ವಾಕಾಂಕ್ಷಿ ಏತನೀರಾವರಿ ಯೋಜನೆಯಿಂದ ತಮ್ಮ ಭೂಮಿ ಕೈತಪ್ಪುತ್ತದೆ ಎಂದು ಕಳೆದ ೧೦ ದಿನದಿಂದ ಸತ್ಯಾಗ್ರಹ ನಡೆಸುತ್ತಿರುವ ರೈತ ಬಿ.ಡಿ.ಹಿರೇಮಠ ಅವರನ್ನು ಭೇಟಿ ಮಾಡಿದ ಶಿವಮೊಗ್ಗ ಸಂಸದರು ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದ್ದಾರೆ.ಮಂಗಳವಾರ ಹಿರೇಕೆರೂರು ತಾಲೂಕು ರಟ್ಟೇಹಳ್ಳಿಗೆ ಭೇಟಿ ನೀಡಿದ್ದ ಸಂಸದ ಬಿ.ವೈ ರಾಘವೇಂದ್ರ ಅವರು, ಈ ನೀರಾವರಿಯಿಂದ ಸಾವಿರಾರು ಎಕರೆ ಭೂಮಿಗೆ ನೀರಾವರಿ ಸಿಗಲಿದೆ. ಹಿರೇಕೆರೂರು ತಾಲೂಕಿನ ಭೂಮಿಗೆ ನೀರಾವರಿ ಯೋಜನೆ ಮಾಡಲಾಗುತ್ತಿದೆ. ಸರಕಾರ ಅಭಿವೃದ್ಧಿ ಮಾಡುವಾಗ ಕೆಲವು ಅಡಚಣೆ ಆಗುತ್ತದೆ. ಹಿರೇಕೆರೂರು ತಾಲೂಕಿನ ರಟ್ಟೆಹಳ್ಳಿ ಭಾಘದ ಕೃಷಿ ಭೂಮಿಗೆ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳುತ್ತೇವೆ ಎಂದು ಮನವಿ ಮಾಡಿದರಲ್ಲದೆ, ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಕೋರಿಕೊಂರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಬಿ.ಡಿ.ಹಿರೇಮಠ ಅವರು, ಕೆಲವು ರೈತರ ಭೂಮಿ ಮುಳುಗಿಸಿ ಬೇರೆ ರೈತರ ಭೂಮಿಗೆ ನೀರು ಕೊಡುವುದು ಸರಿಯಲ್ಲ. ನಷ್ಟಕ್ಕೊಳಗಾಗುವ ರೈತರಿಗೆ ರ‍್ಯಾಯ ವ್ಯವಸ್ಥೆ ಮಾಡಿದ ಬಳಿಕ ಯೋಜನೆ ರೂಪಿಸಿ. ರೈತರು ಎಲ್ಲರೂ ಒಂದೆ ಯಾರಿಗೂ ಅನ್ಯಾಯ ಆಗಬಾರದು ಎಂದು ಸಂಸದರಲ್ಲಿ ಅರಿಕೆ ಮಾಡಿಕೊಂಡರು.
ಕೃಷಿ ಸಚಿವ ಬಿ.ಸಿ.ಪಾಟೀಲ್, ಉಗ್ರಾಣ ನಿಗಮದ ಅಧ್ಯಕ್ಷ ಬಣಕಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

Ad Widget

Related posts

ಮಲೆನಾಡಿನಲ್ಲಿ ಸಂಭ್ರಮದ ಗೌರಿಹಬ್ಬ

Malenadu Mirror Desk

ಜು.19,22 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಕಲ ಸಿದ್ದತೆ : ಸಿಇಓ ವೈಶಾಲಿ

Malenadu Mirror Desk

ರಿಪ್ಪನ್‌ಪೇಟೆಗೇ ಬೀಗ, ಕೃಷಿ ಚಟುವಟಿಕೆಗೂ ಕಷ್ಟ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.