Malenadu Mitra
ಬೇಸಾಯ ಶಿವಮೊಗ್ಗ

ಎಪಿಎಂಸಿ ಭ್ರಷ್ಟಾಚಾರ ತನಿಖೆ ನಡೆಸಿ

ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆದಿರುವ ಅವ್ಯವಹಾರ ಮತ್ತು ಈಗಲೂ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸರ್ಕಾರ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ನವಕರ್ನಾಟಕ ಯುವಶಕ್ತಿ ಜಿಲ್ಲಾ ಘಟಕ ಆಗ್ರಹಿಸಿದೆ.
ಎಪಿಎಂಸಿಯಲ್ಲಿ ವರ್ಷಕ್ಕೊಮ್ಮೆ ಆಡಿಟ್  ಮಾಡಿಸುವುದು ಕರ್ತವ್ಯವಾಗಿದೆ. ಆದರೆ ಇಂತಹ ದೊಡ್ಡ ಸಂಸ್ಥೆಯಲ್ಲಿ ೪ ವರ್ಷಗಳಿಂದ ಆಡಿಟ್ ಮಾಡಿಲ್ಲ. ಆದರೆ ಕೋಟಿಗಟ್ಟಲೆ ಅನುದಾನ ಬಿಡು ಗಡೆ ಮಾಡಲಾಗಿದೆ ಎಂದು ನವಕರ್ನಾಟಕ ಯುವಶಕ್ತಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸತೀಶ್ ಗೌಡ ಇಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಇದರಲ್ಲಿ ಯಾರ್‍ಯಾರ ಕೈವಾಡ ಇದೆ ಎಂದು ತನಿಖೆಯ ನಂತರವೇ ಬೆಳಕಿಗೆ ಬರಬೇಕಾಗಿದೆ. ಹಣ ಬಳಕೆ ಮಾಡಿರುವುದರ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಯಾವುದೇ ದಾಖಲೆಗಳು ನೀಡಿಲ್ಲ. ಎಪಿಎಂಸು ಪ್ರಾಂಗಣದ ಕಂದಾಯವನ್ನು ಮಹಾನಗರಪಾಲಿಕೆಗೆ ಕಟ್ಟುವುದರಲ್ಲಿ ವಿಳಂಬ ಮಾಡಿ ೩ ಲಕ್ಷಕ್ಕೂ ಅಧಿಕ ದಂಡವನ್ನು ಕಟ್ಟಲಾಗಿದೆ. ಇದರಿಂದ ಸಮಿತಿಯ ಬೊಕ್ಕಸಕ್ಕೆ ಮತ್ತು ರೈತರಿಗೆ ನಷ್ಟ ವುಂಟಾಗಿದೆ ಎಂದು ದೂರಿದರು.
ಎಪಿಎಂಸಿಯ ಮಳಿಗೆಗಳ ಲೈಸೆನ್ಸ್ ನವೀಕರಣಕ್ಕೆ ಲಂಚ ನೀಡಬೇಕಾಗಿದೆ. ಲಂಚ ನೀಡಿದ ಮೇಲೆಯೇ ನವೀಕರಣವಾಗುತ್ತದೆ. ಇತ್ತೀಚೆಗೆ ಕೇಸ್‌ವರ್ಕರ್ ಅವರು ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ ಎಂದರು.
ವಾಹನಗಳ ದುರಸ್ತಿಯಲ್ಲಿ ಬೇಕಾಬಿಟ್ಟಿ ಬಿಲ್‌ಗಳನ್ನು ನೀಡಿರುವುದು,ರಸ್ತೆ ಮತ್ತು ಚರಂಡಿ ದುರಸ್ತಿ ಹಾಗೂ ವಿದ್ಯುತ್ ದೀಪ, ಸಿಸಿ ಕ್ಯಾಮೆರಾ ಅಳವಡಿಕೆಯಲ್ಲಿ ಹಗರಣಗಳು ನಡೆದಿವೆ. ಪ್ರಾಂಗಣದ ಸ್ವಚ್ಚತೆ ಸಿಬ್ಬಂದಿ ಟೆಂಡರ್‌ನಲ್ಲಿ ಹಗರಣ ನಡೆದಿರುವುದು ಮಾಹಿತಿ ಹಕ್ಕಿನಿಂದ ಪಡೆದ ದಾಖಲೆಗಳಿಂದ ಬೆಳಕಿಗೆ ಬಂದಿದೆ ಎಂದರು.
ಸರ್ಕಾರದಿಂದ ನೂರಾರು ಕೋಟಿ ಅನುದಾನ ಪಡೆದಿದ್ದರೂ ಸಹ ಇದನ್ನು ಸರಿಯಾಗಿ ಬಳಸಿಕೊಳ್ಳದೇ ಎಪಿಎಂಸಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು, ಕೂಡಲೇ ಸರ್ಕಾರ ತನಿಖೆ ನಡೆಸಬೇಕು. ಒಂದು ವಾರದೊಳಗೆ ತನಿಖೆ ಮಾಡದಿದ್ದಲ್ಲಿ ಸಂಘಟನೆ ವತಿಯಿಂದ ಎಪಿಎಂಸಿ ಆವರಣದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಡಾ.ತಾನಾಜಿ, ಪ್ರದಾನ ಕಾರ್ಯದರ್ಶಿ ಪ್ರಫುಲ್ಲ ಚಂದ್ರ, ಕಾನೂನು ಸಲಹೆಗಾರ ಸಂತೋಷ್ ಎಸ್.ಹೊನ್ನೆಗುಂಡಿ, ಮಂಜುನಾಥ, ಜಯಮಾಲಶೆಟ್ಟಿ, ಮೀನಾಕ್ಷಿ, ಸರಸ್ವತಿ, ರೋಹಿಣಿ ಇನ್ನಿತರರು ಉಪಸ್ಥಿತರಿದ್ದರು.

Ad Widget

Related posts

ಕಾಂಗ್ರೆಸ್ ಗೆ “ಮಧುರ” ಕಾಲ, ಡಿಕೆಶಿ ಸಮ್ಮುಖ ಕೈ ಹಿಡಿಯಲಿರುವ ಮಧುಬಂಗಾರಪ್ಪ

Malenadu Mirror Desk

ಬಡವರ ಸಂಗಾತಿ ಡಾ. ಈಶ್ವರಪ್ಪ ನಿಧನ

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ಉಳಿಸಿ: ರಸ್ತೆ ತಡೆ ನಡೆಸಿ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.