ರೈತ ಸಂಘದ ಸಂಸ್ಥಾಪಕರಾದ ಎನ್.ಡಿ.ಸುಂದರೇಶ್ ಸ್ಮರಣಾರ್ಥ ರೈತ ಸಮುದಾಯದ ಸಮಸ್ಯೆಗಳ ಚರ್ಚೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ರಾಜ್ಯ ರೈತಸಂಘದ ಗೌರಾವಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.
ಡಿಸೆಂಬರ್ 21 ರಂದು ಶಿವಮೊಗ್ಗದ ರೈತಸಂಘದ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೈತರಿಗೆ ಆಗುತ್ತಿದ್ದ ಅನ್ಯಾಯ, ಶೋಷಣೆ ಹಾಗೂ ಅಗೌರವಗಳನ್ನು ಹೋಗಲಾಡಿಸಲು ರೈತ ಸಂಘ ಸ್ಥಾಪನೆ ಮಾಡಲಾಯಿತು. ಸುಂದರೇಶ್ ಅವರು, 13 ವರ್ಷಗಳ ಕಾಲ ರೈತರಿಗೆ ಮಾಡಿದ ಹೋರಾಟಗಳನ್ನು ಸ್ಮರಿಸಲಾಗುವುದು. ಪ್ರಸ್ತುತ ಕೇಂದ್ರಸರಕಾರ ರೈತವಿರೋಧಿ ಕಾಯಿದೆಗಳನ್ನು ಜಾರಿಗೆ ತಂದಿದ್ದು, ಮತ್ತೆ ರೈತರನ್ನು ಗುಲಾಮರಾಗಿ ಮಾಡಲು ಹೊರಟಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸಭೆಯಲ್ಲಿ ವಿಚಾರ ವಿಮರ್ಶೆ ಮಾಡಲಾಗುವುದು. ಅದೇ ದಿನ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಹೆಬ್ಬೂರು ರಾಜು, ಈಶಣ್ಣ, ಎಂ.ಡಿ.ನಾಗರಾಜ್, ಪಿ.ಡಿ.ಮಂಜಪ್ಪ, ರಾಘವೇಂದ್ರ ಮತ್ತಿತರರು ಹಾಜರಿದ್ದರು.
previous post
next post