ಶಿವಮೊಗ್ಗ: ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದವರು ಅವರ ಪಕ್ಷದವರೇ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಈಗ ಪಕ್ಷ ತಮಗೆ ತಾಯಿ ಎಂದು ಹೇಳಿದ್ದಾರೆ. ಆದರೆ ಹಿಂದೆ ಪಕ್ಷದ ಅನೇಕ ನಾಯಕರು ಸೋತಾಗ ಇವರಿಗೆ ಪಕ್ಷ ತಾಯಿ ಎನಿಸಲಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಸೋತಾಗ ಪಕ್ಷ ತಾಯಿ ಎನಿಸಲಿಲ್ಲ. ಸರಿಯಾಗಿ ಕೆಲಸ ಮಾಡದೆ ಸೋತು ಈಗ ಯಾರದ್ದೊ ಮೇಲೆ ಹಾಕುವ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆ ನೋಡಿದರೆ ಸಿದ್ದರಾಮಯ್ಯ ಕಾಂಗ್ರೆಸ್ ನಿರ್ನಾಮಕ್ಕೆ ಮುಂದಾಗಿದ್ದಾರೆ ಎನಿಸುತ್ತದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರು ಇನ್ನು ಮುಂದೆ ಯಾರೇ ಸೋತರೂ ತಮ್ಮ ಪಕ್ಷದ ನಾಯಕರನ್ನು ದೂರುಬಹುದು. ಹಿರಿಯ ನಾಯಕರಾದ ಸಿದ್ದರಾಮಯ್ಯ ಈ ಸಂಪ್ರದಾಯಕ್ಕೆ ನಾಂದಿಹಾಡಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.
previous post
next post