ದಶಕದ ಹಿಂದೆ ನಕ್ಸಲ್ ಭಾದಿತ ಪ್ರದೇಶವಾಗಿ ಗುರುತಾಗಿದ್ದ ತಾಲೂಕಿನ ಬಿದರಗೋಡು ಗ್ರಾ.ಪಂ. ವ್ಯಾಪ್ತಿಯ ತಲ್ಲೂರಂಗಡಿ ಸಂಪರ್ಕದ ಜೋಗಿಮನೆ ಮತ್ತು ಹೊಸ್ಕರೆ ಗ್ರಾಮಸ್ಥರು ಗ್ರಾ.ಪಂ. ಚುನಾವಣೆ ಬಹಿಷ್ಕರಿಸಿದ್ದಾರೆ.
ಗ್ರಾಮ ಸಂಪರ್ಕದ ರಸ್ತೆ ಪ್ರವೇಶದ ಮುಂಭಾಗ ಬ್ಯಾನರ್ ಕಟ್ಟಿ ಚುನಾವಣೆ ಬಹಿಷ್ಕಾರದ ನಿರ್ಧಾರ ಪ್ರಕಟಿಸಿದ್ದಾರೆ. ಸುಮಾರು 1ವರೆ ಕಿ.ಮೀ.ದೂರದ ಸಂಪರ್ಕ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳ ಗ್ರಾಮಸ್ಥರ ಬೇಡಿಕೆ ಈಡೇರಿಸುವಲ್ಲಿ ಆಡಳಿತ ವಿಫಲವಾಗಿರುವುದಕ್ಕೆ ತೀವ್ರಅಸಮಾಧಾನಗೊಂಡಿರುವ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ದಂತಹ ಕಠಿಣ ತೀರ್ಮಾನ ಕೈಗೊಂಡಿದ್ದಾರೆ.
ಜೋಗಿಮನೆ-ತಲ್ಲೂರಂಗಡಿ ಸಂಪರ್ಕ ರಸ್ತೆ ಅಭಿವೃದ್ಧಿಗೊಳ್ಳದ ಪರಿಣಾಮ ಮಳೆಗಾಲದಲ್ಲಿ ಸಂಚಾರ ಸಾಧ್ಯವಾಗುತ್ತಿಲ್ಲ.ರಸ್ತೆಮಾರ್ಗದ ಮೋರಿಬಳಿ ಹಳ್ಳದಲ್ಲಿ ನೀರು ತುಂಬುವುದರಿಂದ ಸಂಪರ್ಕ ಕಡಿತವಾಗುತ್ತದೆ.ಶಾಲೆ,ಆಸ್ಪತ್ರೆ,ತುರ್ತು ಅಗತ್ಯ ಸೇವೆಗಳ ಸೌಕರ್ಯ ಪಡೆಯುವುದಕ್ಕೆ ವಿಪರೀತ ಕಷ್ಟ ಪಡಬೇಕಾಗಿದೆ. 2013ರಲ್ಲಿ ರಸ್ತೆ ಮಾರ್ಗದ ಅಭಿವೃದ್ಧಿಗಾಗಿ ಮಣ್ಣಿನ ಕೆಲಸ ಮಾಡಲಾಗಿದ್ದು ನಂತರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿ ಮಂಜೂರು ಆಗಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ.
ಜೋಗಿಮನೆ – ಹೊಸ್ಕರೆ ಮಜರೆ ಗ್ರಾಮದಲ್ಲಿ ಸುಮಾರು 15 ಕುಟುಂಬಗಳು ವಾಸ ಇದ್ದು 60ಕ್ಕೂ ಹೆಚ್ಚು ಮತದಾರರು ಇದ್ದಾರೆ. ನಕ್ಸಲ್ ಪೀಡಿತ ಪ್ರದೇಶವಾಗಿ ಘೋಷಣೆಗೊಂಡಿದ್ದ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿಗೊಳ್ಳದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿ
ಯಂತಿದೆ.