ಶರಾವತಿ ಸಂತ್ರಸ್ಥರ ಹಾಗೂ ಅಧಿಕಾರಸ್ಥರ ನಡುವೆ ಸೇತುವೆಯಂತೆ ಕೆಲಸ ಮಾಡಿದ ಎಸ್.ಕೆ.ಮೂರ್ತಿರಾವ್ ಜನಾನುರಾಗಿಯಾಗಿದ್ದರು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಹಾರೋಹಿತ್ತಲು ಕಂಬತ್ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮುಳುಗಡೆ ಸಂತ್ರಸ್ಥರು ಮತ್ತು ತುಳಿತಕ್ಕೊಳಗಾದವರ ಬಗ್ಗೆ ಕಾಳಜಿ ಹೊಂದಿದ್ದ ಅವರು ಹಲವು ಜನಪರ ಕೆಲಸಗಳಿಗೆ ಕಾರಣರಾಗಿದ್ದರು. ತಾವಿದ್ದ ಸರಕಾರಿ ಹುದ್ದೆಯ ನೆಲೆಯಲ್ಲಿ ಜನಪರ ಚಿಂತನೆ ಮೂಲಕ ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡಿದ್ದರು ಎಂದು ಕಾಡೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಮೂರ್ತಿರಾವ್ ಒಬ್ಬ ಸಾಮಾಜಿಕ ಚಿಂತನೆಯ ವ್ಯಕ್ತಿಯಾಗಿದ್ದರು. ಶಾಸಕನಾಗಿದ್ದಾಗ ಅವರ ಸಲಹೆ ಸಹಕಾರ ಚೆನ್ನಾಗಿತ್ತು. ಅವರ ಸೋದರ ಸುಬ್ಬನಾಯ್ಕರ ಮೂಲಕ ನಗೆ ಉತ್ತಮ ಸಂಪರ್ಕ ಇತ್ತು. ನ್ಯಾಯಾಂಗ ಇಲಾಖೆಯಲ್ಲಿದ್ದುಕೊಂಡು ಬಡವರ ಪರ ಕೆಲಸ ಮಾಡಿದ್ದರು ಎಂದು ಹೇಳಿದರು.
ಕೃಷಿವಿವಿ ಕುಲಪತಿ ಡಾ.ಎಂ.ಕೆ.ನಾಯ್ಕ್ ಅವರು ಮಾತನಾಡಿ, ಮೂರ್ತಿರಾವ್ ಜನಪರ ಚಿಂತನೆಯ ವ್ಯಕ್ತಿಯಾಗಿದ್ದರು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಚಾರದಲ್ಲಿ ಅವರಿಂದ ಸಾಕಷ್ಟು ಸಲಹೆ ಸಹಕಾರ ಪಡೆದುಕೊಂಡಿದ್ದೇನೆ. ಅವರ ಆಶಯದಂತೆ ಸಂತ್ರಸ್ಥರ ಪ್ರದೇಶದಲ್ಲಿ ಕೃಷಿ ವಿವಿಯ ಕೆಲಸಗಳನ್ನು ಮಾಡುವ ಪ್ರಯತ್ನ ಮಾಡುವೆ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಮೂರ್ತಿರಾವ್ ಮತ್ತು ನಾನು ಒಂದೇ ಸಮಯದಲ್ಲಿ ವಕೀಲಕೆ ಆರಂಭಿಸಿದವರು. ಅವರು ಸಮಾಜವಾದಿ ಚಿಂತನೆಯ ಕಾರಣಕ್ಕೆ ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅವರ ಸಖ್ಯ ಹೊಂದಿದ್ದರು. ಮತ್ತು ಅದೇ ನೆಲೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರು ಇನ್ನಷ್ಟು ದಿನ ನಮ್ಮೊಂದಿಗೆ ಇರಬೇಕಾಗಿತ್ತು ಎಂದು ಹೇಳಿದರು.
ಪ್ರಾಧ್ಯಾಪಕ ಡಾ.,ಅಣ್ಣಪ್ಪ ಮಳೀಮಠ್ ಅವರು, ಮೂರ್ತಿ ರಾವ್ ಅವರು ಹೊಸ ತಲೆಮಾರಿನ ಹುಡುಗರಿಗೆ ದಿಕ್ಸೂಚಿಯಂತಿದ್ದರು. ಅವರು ಸರಕಾರಿ ಉದ್ಯೋಗ ಹಿಡಿದು ಪಟ್ಟಣ ಸೇರಿದ್ದರು ನೆಲಮೂಲದ ಚಿಂತನೆ ಬಿಟ್ಟಿರಲಿಲ್ಲ. ಊರು ಮನೆಯ ಮೇಲೆ ಅಪಾರ ಅಕ್ಕರೆ ಅವರಿಗಿತ್ತು. ಈ ಭಾಗದ ಹಲವು ವಿದ್ಯಾವಂತರಿಗೆ ಅವರು ಸ್ಫೂರ್ತಿಯಾಗಿದ್ದರು ಎಂದು ಹೇಳಿದರು.
ಹಿರಿಯ ಸಾಹಿತಿ ಮತ್ತು ಪತ್ರಕರ್ತ ಲಕ್ಷö್ಮಣ್ ಕೊಡಸೆ ಮಾತನಾಡಿ, ಮೂರ್ತಿರಾವ್ ನನಗೆ ಸಹಪಾಠಿಯಾಗಿದ್ದರು. ಸಮಾಜವಾದಿ ಚಿಂತನೆಯ ಅವರಲ್ಲಿ ತಳಸಮುದಾಯಗಳ ಬಗ್ಗೆ ಅಪಾರ ಕಾಳಜಿ ಇತ್ತು. ಅವರ ಅಗಲಿಗೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು,ಶಿವಮೊಗ್ಗ ಡಯೆಟ್‌ನ ಉಪನ್ಯಾಸಕಿ ಜ್ಯೋತಿಕುಮಾರಿ ಅವರು ಮಾತನಾಡಿ, ಮೂರ್ತಿರಾವ್ ಜನಾನುರಾಗಿ ಎನ್ನುವುದಕ್ಕೆ ಇಲ್ಲಿ ನೆರೆದ ಗಣ್ಯರೇ ಸಾಕ್ಷಿ. ಅವರ ಆದರ್ಶಗಳನ್ನು ಕಿರಿಯರಾದ ನಾವು ಪಾಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಸೂಡೂರು ಸುಧಾಕರ್, ಪ್ರಶಾಂತ್ , ಸೇರಿದಂತೆ ಅನೇಕ ಮುಖಂಡರು. ವಕೀಲರ, ಅಧಿಕಾರಿಗಳು ಈಡಿಗ ಸಮಾಜದ ಪ್ರಮುಖರು ಭಾಗವಹಿಸಿದ್ದರು. ಎಸ್..ಸಿ.ರಾಮಚಂದ್ರ ಅವರು ಎಲ್ಲರನ್ನು ಸ್ವಾಗತಿಸಿದರು.
previous post
next post