ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಈಶ್ವರಪ್ಪ ಅವರು ಪರಸ್ಪರ ನಿಂದಿಸಿಕೊಳ್ಳುವುದು ಮಾಮೂಲಿ. ಮೆದುಳಿಲ್ಲ, ಅದರಲ್ಲಿ ಬುದ್ದಿ ಇಲ್ಲ, ನಾಲಗೆಗೆ ಲಿಂಕ್ ಇಲ್ಲ ಎಂಬುದು sಸವಕಲು ಸರಕಾಗಿ ಹೋಗಿದೆ. ಆದರೆ ಈಗ ಮರಿ ಟೈಗರ್ ಕೆ.ಇ.ಕಾಂತೇಶ್ ಟಗರಿಗೇ ಡಿಚ್ಚಿ ಕೊಟ್ಟಿರುವುದು ಹೊಸ ಸುದ್ದಿ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಹೋರಾಟಕ್ಕೆ ಆರ್‌ಎಸ್‌ಎಸ್ ಬೆಂಬಲ ಕೊಟ್ಟರೆ ತಪ್ಪೇನು ? ಎಂಬ ಪ್ರಶ್ನೆಯನ್ನು ಕಾಂತೇಶ್ ಸಿದ್ದರಾಮಯ್ಯ ಅವರಿಗೆ ಕೇಳಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಸಂದರ್ಭ ಶಿವಮೊಗ್ಗ ಸಮೀಪದ ಗೊಂದಿ ಚಟ್ನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂತೇಶ್, ಕುರುಬ ಸಮುದಾಯಕ್ಕೆ ಒಳಿತಾಗಬೇಕೆಂದು ಮೀಸಲು ಹೋರಾಟ ಮಾಡಲಾಗುತ್ತಿದೆ. ನಮ್ಮ ಈ ಹೋರಾಟಕ್ಕೆ ಆರ್.ಎಸ್ ಬೆಂಬಲ ನೀಡಿದರೆ ತಪ್ಪೇನು ಇಲ್ಲ. ನಮ್ಮೆಲ್ಲರಿಗೂ ಆರ್‌ಎಸ್‌ಎಸ್ ತಾಯಿ ಇದ್ದ ಹಾಗೆ ತಾಯಿ ಬೆಂಬಲ ಪಡೆದು ಹೋರಾಟ ಮಾಡಲು ನಮಗೆ ಯಾವುದೇ ಮುಜುಗರ ಇಲ್ಲ. ಅದೇ ರೀತಿ ಬಂಡ್ಯಪ್ಪ ಕಾಂಶAಪುರ ಅವರು ಜೆಡಿಎಸ್ ನಾಯಕರು , ಕಾಂಗ್ರೆಸ್‌ನ ವಿರೂಪಾಕ್ಷಪ್ಪ ನಮ್ಮ ಹೋರಾಟ ಸಮಿತಿ ಅಧ್ಯಕ್ಷರು. ಎಲ್ಲಾ ಪಕ್ಷದವರು ಎಸ್ಟಿಮೀಸಲು ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ ಎಂದ ಕಾಂತೇಶ್, ಸಿದ್ದರಾಮಯ್ಯ ಅವರ ಬೆಂಬಲವೂ ಈ ಹೋರಟಕ್ಕೆ ಇದೆ. ಅವರು ಮುಂದೆ ನಮ್ಮೊಂದಿಗೆ ಸೇರಿಕೊಳ್ತಾರೆ ಅಂದು.
previous post
next post