ರಾಜ್ಯಸರಕಾರ ಎಪಿಎಂಸಿ ವರ್ತಕರು ನಡೆಸುವ ಖರೀದಿ ಮೇಲೆ ಶೇ.೧೦೦ ಸೆಸ್ ವಿಧಿಸಿರುವುದನ್ನು ಖಂಡಿಸಿ ಶಿವಮೊಗ್ಗ ಎಪಿಎಂಸಿ ಅಡಕೆ ಮಂಡಿ ವರ್ತಕರು ಎರಡು ದಿನಗಳ ವಹಿವಾಟು ಬಂದ್‌ಮಾಡಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿರುವುದರಿಂದ ಎಪಿಎಂಸಿಯಿಂದ ಹೊರಗೆ ಖರೀದಿಸುವ ಅಡಕೆಗೆ ಯಾವುದೇ ಸೆಸ್ ಇರುವುದಿಲ್ಲ. ಆದರೆ ಮಂಡಿಯಲ್ಲಿ ಖರೀದಿಸುವ ಮಾಲಿಗೆ ಸೆಸ್ ವಿಧಿಸುವ ಮೂಲಕ ಅವೈಜ್ಞಾನಿಕ ಕಾನೂನು ತಂದಿದೆ. ರಾಜ್ಯ ಸರಕಾರಕ್ಕೆ ಮನವಿ ಮಾಡಿದ ಕಾರಣ ಶೇ.೩೫ ಕ್ಕೆ ಸೆಸ್ ಹಾಕಲಾಗಿತ್ತು. ಆದರೆ ಈಗ ಏಕಾಏಕಿ ಮತ್ತೆ ಶೇ.೧೦೦ ಸೆಸ್ ವಿಧಿಸಿರುವ ರಾಜ್ಯ ಸರಕಾರದ ಕ್ರಮ ಖಂಡನೀಯ, ಹೀಗಾದಲ್ಲಿ ವಹಿವಾಟು ನಡೆಸುವುದು ಅಸಾಧ್ಯ ಎಂಬ ಕಾರಣಕ್ಕೆ ಅಡಿಕೆ ವರ್ತಕರ ಸಂಘ ಡಿ.೨೧ ಮತ್ತು ೨೨ ರಂದು ಅಡಕೆ ವಹಿವಾಟು ಸ್ಥಗಿತಗೊಳಿಸಿದೆ.
ಸೋಮವಾರ ಎಲ್ಲ ವರ್ತಕರು ತಮ್ಮ ವಹಿವಾಟು ಬಂದ್ ಮಾಡಿ ಎಪಿಎಂಎಸಿ ಪ್ರಾಂಗಣದ ಹೊರಗೆ ಬಂದು ಸರಕಾರದ ಕ್ರಮ ಖಂಡಿಸಿ ತಮ್ಮ ಆಕ್ರೋಶ ಹೊರಹಾಕಿದರು. ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಕಾರ್ಯದರ್ಶಿ ಕೆ.ಸಿ.ಮಂಜುನಾಥ್, ಎಸ್.ಮಂಜುನಾಥ್ ಸೇರಿದಂತೆ ಅನೇಕ ವರ್ತಕರು ಭಾಗವಹಿಸಿದ್ದರು.
previous post
next post