Malenadu Mitra
ರಾಜಕೀಯ ರಾಜ್ಯ

ಬಿಜೆಪಿ ರಾಜ್ಯ ಸಮಿತಿ ಸಭೆ

ಶಿವಮೊಗ್ಗ: ಮಹತ್ವದ ತಿರುವು ಪಡೆದುಕೊಳ್ಳಲಿರುವ ಬಿಜೆಪಿ ರಾಜ್ಯ ಸಮಿತಿ ಸಭೆ ಶಿವಮೊಗ್ಗದ ಪೆಸಿಟ್ ಕಾಲೇಜಿನ ಆವರಣದಲ್ಲಿ  ಜ.೨ ಮತ್ತು ೩ ರಂದು ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹಳ ವರ್ಷಗಳ ನಂತರ ರಾಜ್ಯ ಬಿಜೆಪಿ ರಾಜ್ಯಸಮಿತಿ ಸಭೆ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಜನವರಿ ೨ ಮತ್ತು ೩ ರಂದು ನಡೆಯಲಿರುವ ಈ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉದ್ಘಾಟಿಸಲಿದ್ದಾರೆ ಮತ್ತು ಎರಡೂ ದಿನವೂ ಸಭೆಯಲ್ಲಿ ಇರುತ್ತಾರೆ. ಇವರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಷಿ ಹಾಗೂ ರಾಜ್ಯ ಮತ್ತು ಜಿಲ್ಲೆಯ ಬಿಜೆಪಿ ಮುಖಂಡರುಗಳು ಸೇರಿ ೨೦೦ ಮಂದಿ  ಭಾಗವಹಿಸಲಿದ್ದಾರೆ ಎಂದರು.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ  ಈ ಸಭೆ ನಡೆಯಲಿದೆ. ಹಲವು ಮಹತ್ವದ ತಿರುವುಗಳು ಈ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಳ್ಳುವ ನಿರೀಕ್ಷೆ ಇದೆ ಮತ್ತು ಮುಂಬರುವ ಜಿ.ಪಂ. ಹಾಗೂ ಗ್ರಾ.ಪಂ. ಚುನಾವಣೆಗೂ ಇದು ದಾರಿದೀಪವಾಗಲಿದೆ ಎಂದರು.
ಇದಕ್ಕೂ ಮೊದಲು ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಾಜ್ಯ ಸಮಿತಿ ಸಭೆಗೆ ಚಾಲನೆ ನೀಡಲಾಯಿತು. ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯ ಸಮಿತಿ ಸಭೆಯ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಕೋಷ್ಟಗಳ ಸಂಚಾಲಕ ಎಂ.ಬಿ.ಭಾನುಪ್ರಕಾಶ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಸಹಕಾರ್ಯದರ್ಶಿ ತುಳಸಿಮುನಿರಾಜು ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಕೆಎಸ್‌ಎಸ್‌ಐಡಿಸಿ ಉಪಾಧ್ಯಕ್ಷ ಎಸ್.ದತ್ತಾತ್ರಿ, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಉಪಸ್ಥಿತರಿದ್ದರು.


ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಇದು ನಂಬಿಕೆ ಉಳಿಸಿಕೊಂಡ ಪಕ್ಷ. ಜೆಡಿಎಸ್ ನಮ್ಮ ಜೊತೆಗೆ ಬಂದರೆ ಅವರ ಜೊತೆ ವಿಲೀನಕ್ಕೂ ಸಿದ್ದ ಮತ್ತು ಅವರ ಬೆಂಬಲಕ್ಕೂ ಬದ್ದ. ಆದರೆ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಹೊರತುಪಡಿಸಿ ಯಾವುದೆ ಪಕ್ಷದೊಂದಿಗೆ ವಿಲೀನ ಅಥವಾ ಹೊಂದಾಣಿಕೆಯನ್ನು  ಮಾಡಿಕೊಳ್ಳಲು ಸಿದ್ದ.
ಬಿಜೆಪಿ ಮುಂದಿನ ದಿನಗಳಲ್ಲಿ ಯಾರ ಸಹಾಯವೂ ಇಲ್ಲದೇ ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸುತ್ತದೆ. ಈಗಾಗಲೆ ಸಂಘಟನೆಯ ಶಕ್ತಿ ಮತ್ತಷ್ಟು ಹೆಚ್ಚುತ್ತಿದೆ.


-ಕೆ.ಎಸ್. ಈಶ್ವರಪ್ಪ
Ad Widget

Related posts

ಹಳ್ಳಿಗಳಲ್ಲಿ ಇಂಟರ್‌ನೆಟ್ ಸೇವೆ ಯೋಜನೆಗೆ ಸಾಗರ ತಾಲೂಕು ಆಯ್ಕೆ : ಬಿ.ವೈ.ರಾಘವೇಂದ್ರ

Malenadu Mirror Desk

ಅಮೃತ್ ನೋನಿ ಸಂಸ್ಥೆಗೆ ಕೇಂದ್ರದ ಪುರಸ್ಕಾರ, ಪ್ಲಾಂಟ್ ಜೀನೋಮ್ ಸೇವಿಯರ್ ಪ್ರಶಸ್ತಿಗೆ ಬಾಜನರಾದ ಶ್ರೀನಿವಾಸ್ ಮೂರ್ತಿ

Malenadu Mirror Desk

ಶಿವಮೊಗ್ಗದಲ್ಲಿ 657 ಸೋಂಕು,6 ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.