ಕರ್ನಾಟಕ ರಾಜ್ಯ ರೈತರ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್ ಸ್ಮರಣೆ ಕಾರ್ಯಕ್ರಮ ಸೋಮವಾರ ಶಿವಮೊಗ್ಗದ ರೈತ ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ರೈತ ಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟುಗಳು ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳ ಬಗ್ಗೆ ಸಮಾರಂಭದಲ್ಲಿ ಚರ್ಚಿಸಲಾಯಿತು.ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಸಂಘಟನೆಯಿAದ ರೈತ ಪರ ಕೆಲಸ ಮಾಡುವ ಬಗ್ಗೆ ಪ್ರಮುಖರು ಚರ್ಚೆ ನಡೆಸಿದರು.
ಸಭೆಯಲ್ಲಿ ರಕ್ತದಾನ ಶಿಬಿರವನ್ನು ಆರೋಜಿಸಲಾಗಿತ್ತು. ರೈತ ಯುವಕರು ರಕ್ತದಾನ ಮಾಡುವ ಮೂಲಕ ರೈತನಾಯಕ ಸುಂದರೇಶ್ ಹೋರಾಟ ಮತ್ತು ಸಂಘಟನಾ ಕಾರ್ಯವನ್ನು ಸ್ಮರಿಸಿದರು.
ರಾಜ್ಯರೈತ ಸಂಘದ ಗೌರವಾಧ್ಯಕ್ಷ ಎಚ್,ಆರ್,ಬಸವರಾಜಪ್ಪ, ಮುಖಂಡರಾದ ಡಾ,ಚಿಕ್ಕಸ್ವಾಮಿ, ಮಲ್ಲಿಕಾರ್ಜುನ, ಹನುಮಂತಪ್ಪ ಮತ್ತಿತರರು ಹಾಜರಿದ್ದ
previous post
next post