Malenadu Mitra
ಮಲೆನಾಡು ಸ್ಪೆಷಲ್ ರಾಜಕೀಯ ರಾಜ್ಯ

ನಿಮ್ಮಂಥ ಅಪ್ಪಾ ಇಲ್ಲಾ… ಒಂದೊಂದು ಮಾತೂ ಬೆಲ್ಲ…

ಅದು ತೊಂಬತ್ತರ ದಶಕ, ಶಿವಮೊಗ್ಗದ ನೆಹರೂ ಮೈದಾನದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆ, ರಾಷ್ಟಿçÃಯ ನಾಯಕರ ಸಮ್ಮುಖದಲ್ಲಿ ಬಿಜೆಪಿಯ ಬೆಂಕಿಚೆಂಡು ಕೆ.ಎಸ್.ಈಶ್ವರಪ್ಪ ಅವರ ಭೀಷಣ ಭಾಷಣ. ಕಾಂಗ್ರೆಸ್‌ನ ವಂಶಪರಂಪರೆ, ನೆಹರೂ ಕುಟುಂಬದ ಬಿಗಿಹಿಡಿತ, ಅರವತ್ತು ವರ್ಷ ಆಡಳಿತ… ಅಬ್ಬಾಬ್ಬಾ ಆ ಭಾಷಣ ಕೇಳಿದ ಯುವ ಮನಸುಗಳಿಗೆ ಎದ್ದು ಹೋಗಿ ಈಶ್ವರಪ್ಪರಿಗೆ ಒಂದು ಸೆಲ್ಯೂಟ್ ಹೊಡಿಬೇಕು ಅನ್ನಿಸುತಿತ್ತು.
ಈಗ ವಾಸ್ತವಕ್ಕೆ ಬರೋಣ, ಕಾಡಿನ ರಾಜ ಸಿಂಹ, ಆದರೆ ಈಗ ಅವುಗಳು ಕಡಿಮೆ ಅಲ್ವಾ ಹುಲಿನೇ ಕಾಡಿನ ರಾಜ ಅನ್ನೋಣ. ಈ ಹುಲಿ ಮುದ್ದಾದ ಮರಿಗಳನ್ನು ಸಾಕಿ ಅವಕ್ಕೂ ಏನಾದರೊಂದು ಮಾಡಬೇಕೆಂದು ಬಯಸಿದಾಗ, ಚಿಕ್ಕ ಶಿಕಾರಿಯನ್ನು ನಿಗದಿ ಮಾಡುತ್ತದೆ. ಕರುಳ ಬಳ್ಳಿಗಳು ಮುಂದೆ ಹೋದರೂ ಹಿನ್ನೆಲೆಯಲ್ಲಿ ಅವರ ರಕ್ಷಣೆಗೆ ಹುಲಿ ಇದ್ದೇ ಇರುತ್ತದೆ. ಬಿಜೆಪಿಯ ಅಗ್ರಗಣ್ಯ ನಾಯಕರಾದ ಈಶ್ವರಪ್ಪ ಅವರು ಕೂಡಾ ತಮ್ಮ ಪುತ್ರ ಕೆ.ಇ.ಕಾಂತೇಶ್ ಅವರಿಗೆ ಆರಂಭಿಕ ಹಂತದಲ್ಲಿ ಹೊಳಲೂರು ಜಿಲ್ಲಾಪಂಚಾಯಿತಿ ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡರು. ಕಾಂತೇಶ್ ಕೂಡಾ ಅಲ್ಲಿ ಸಾಕಷ್ಟು ಶಿಕಾರಿ ಕಲಿತರು.

ಎಸ್ಟಿ ಹೋರಾಟಕ್ಕೆ ಧುಮುಕಿದ ಕಾಂತೇಶ್:
ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತವರ ಮಕ್ಕಳ ಪಾರುಪತ್ಯ ವೃದ್ಧಿಸುತ್ತಲೇ ಹೋದಂತೆ ಈಶ್ವರಪ್ಪ ಕೂಡಾ ರಾಜ್ಯದಲ್ಲಿ ಮೂರನೇ ಅತಿದೊಡ್ಡ ಸಮುದಾಯದ ಪ್ರತಿನಿಧಿಯಾಗಿ ಸುಮ್ಮನೆ ಕೂರಲಾದೀತೆ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಹೋರಾಟದ ಮುನ್ನೆಲೆಗೆ ಬಂದರು. ಇಲ್ಲೂ ಕೂಡಾ ಒಬ್ಬರೇ ಹೋಗಲಿಲ್ಲ. ರಾಜ್ಯದ ಉದ್ದಗಲಕ್ಕೂ ಪುತ್ರ ಕಾಂತೇಶ್ ಅವರನ್ನು ಕರೆದುಕೊಂಡು ಹೋದರು. ಪ್ರಭಾವಿ ಕುರುಬ ಸಮಾಜದ ಸರ್ವಸಭೆಗಳ ವೇದಿಕೆಯ ಮೇಲೆ ಕಾಂತೇಶ್ ಕೂಡಾ ತಾಲೀಮು ನಡೆಸಿದರು. ಅಂದರೆ ಈಶ್ವರಪ್ಪ ಅವರು ಕುರುಬ ಸಮಾಜದಲ್ಲಿ ತಮ್ಮ ಪುತ್ರನನ್ನು ಮುಂಚೂಣಿಗೆ ತರುವುದರ ಜತೆಗೆನೇ ಪಕ್ಷದಲ್ಲಿಯೂ ಯಾವುದೇ ಜವಬ್ದಾರಿಯನ್ನು ಕಾಂತೇಶ್ ನಿಭಾಯಿಸಬಲ್ಲರು ಎಂಬ ಸಂದೇಶವನ್ನು ಕೊಟ್ಟಿದ್ದಾರೆ.

ಮೇಲ್ಮನೆಗೆ ಅಖಾಡ:
ಈಶ್ವರಪ್ಪ ಅವರು ಈಗ ಹೇಳಿಕೇಳಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು. ಕೊರೊನ ಅವಧಿಯಲ್ಲಿ ಸುದ್ದಿ ಮಾಡಿದ್ದು ಇದೊಂದೇ ಖಾತೆ. ಉದ್ಯೋಗ ಖಾತ್ರಿಯಿಂದಾಗಿ ಸಾಕಷ್ಟು ಕೆಲಸ ಮತ್ತು ಹೆಸರೂ ಬಂದಿದೆ. ಈ ಹೊತ್ತಲ್ಲೇ ಗ್ರಾಮ ಪಂಚಾಯಿತಿ ಚುನಾವಣೆನೂ ನಡೀತಿದೆ. ಪ್ರಸ್ತುತ ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿರುವ ಕಾಂತೇಶ್ ಅವರನ್ನು ಮುಂದೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿಸುವ ಎಲ್ಲಾ ಸಿದ್ಧತೆಗಳೂ ನಡೀತಿವೆ ಎನ್ನಲಾಗಿದೆ. ಈಗಾಗಲೇ ಪ್ರಭಾವಿ ಕುರುಬ ಸಮಾಜದ ಪರವಾಗಿ ಕಾಂತೇಶ್ ದೊಡ್ಡ ಹೋರಾಟ ಮಾಡುತ್ತಿದ್ದಾರೆ. ಇದರಿಂದ ಮುಂದೆ ಟಿಕೆಟ್ ಕೇಳುವಾಗ ಯಾವ ಅಡ್ಡಿಯೂ ಬರುವ ಸಾಧ್ಯತೆಗಳಿಲ್ಲ ಎಂಬುದು ಬಿಜೆಪಿ ಒಳಮನೆಯಲ್ಲಿನ ಅಭಿಪ್ರಾಯ. ಕಾಂತೇಶ್ ಅವರು ಕೂಡಾ ತಂದೆ ಹಾಕಿಕೊಟ್ಟ ಜಾಡಿನಲ್ಲಿ ಒಂದೆಜ್ಜೆ ಆಚೀಚೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ಲಾಸ್ಟ್ ಸಿಪ್…
ಭಾರತದ ರಾಜಕೀಯ ಇತಿಹಾಸದುದ್ದಕ್ಕೂ ಕುಟುಂಬ ರಾಜಕಾರಣ ದಾಖಲಾಗಿದೆ. ಎಷ್ಟೋ ಮನೆತನಗಳು ಈ ದೇಶದಲ್ಲಿ ದಶಕಗಳ ಕಾಲ ಆಳಿವೆ. ಈಗ ಕಟುಂಬ ರಾಜಕಾರಣ ವಿಷಯವೇ ಅಲ್ಲ. ಹಂಗAತ ಅದನ್ನು ತಪ್ಪಿಸಲು ಆಗುವುದೂ ಇಲ್ಲ ದುರಂತ ಸನ್ನಿವೇಶ ರಾಜಕಾರಣದ್ದಾಗಿದೆ. ಆದರೆ ನಮ್ಮ ಈ ರಾಜಕಾರಣಿಗಳ ಮಕ್ಕಳು ಕನಿಷ್ಠ ಪಕ್ಷ ಅವರವರ ಅಪ್ಪಂದಿರನ್ನಾದರೂ ಓದಿಕೊಳ್ಳಬೇಕು ಕಣ್ರಿ. ದೇವೇಗೌಡರ ಹೋರಾಟ, ಬದ್ಧತೆಯನ್ನು ಅವರ ಮಕ್ಕಳು, ಯಡಿಯೂರಪ್ಪ ಅವರ ಹೋರಾಟ, ರಾಜಕೀಯ ಮುತ್ಸದ್ದಿತನ,ಸಾಮಾಜಿಕ ಕಾಳಜಿಯನ್ನು ಅವರು ಪುತ್ರರು. ಬಂಗಾರಪ್ಪರ ರಾಜಕೀಯ ಕಾಳಜಿ ಸದನದಲ್ಲಿನ ಅವರ ಭಾಷಣ, ಬರಹವನ್ನು ಅವರ ವಾರಸುದಾರರು, ಕಾಗೋಡು ತಿಮ್ಮಪ್ಪ ಅವರ ಕಾಳಜಿ, ರಾಜಕೀಯ ಜ್ಞಾನ, ಭಾಷಣವನ್ನು ಅವರ ಪೀಳಿಗೆ, ಈಶ್ವರಪ್ಪ ಅವರ ರಾಜಕೀಯ ಪಯಣ ಮತ್ತು ಹೋರಾಟಗಳನ್ನು ಅವರ ಮಕ್ಕಳು ಅಧ್ಯಯನ ಮಾಡಿದರೆ ಮುಂದಿನ ದಿನಮಾನದಲ್ಲಿ ಒಂದಷ್ಟು ಮೌಲ್ಯಗಳನ್ನು ನಿರೀಕ್ಷಿಸಬಹುದು ಅಲ್ಲವೆ ?

Ad Widget

Related posts

ಹೊರಗಿನ ಶಕ್ತಿಗಳಿಗೆ ಮಾತಿಗೆ ಮರುಳಾಗದೆ ಶಾಂತಿಯಿಂದ ನೆಲಸಿ : ಶಾಂತಿನಗರ ನಿವಾಸಿಗಳಿಗೆ ಎಸ್ ಪಿ ಸಲಹೆ

Malenadu Mirror Desk

ಪ್ರತಿಭಟನೆ ವೇಳೆ ಉಪನ್ಯಾಸಕಿ ಅಸ್ವಸ್ಥ : ಎಂಎಲ್ಸಿ ಡಾ.ಧನಂಜಯ ಸರ್ಜಿರಿಂದ ಚಿಕಿತ್ಸೆ

Malenadu Mirror Desk

ಶಿವಮೊಗ್ಗದಲ್ಲಿ ಡಿವಿಜಿ ಪಾರ್ಕ್ಗೆ ಅಡಿಗಲ್ಲು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.