ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿ ಸೋಲಾರ್ ಅಳವಡಿಸಿ ಅದರ ಮೂಲಕ ದಿನದ ೨೪ ಗಂಟೆಯೂ ವಿದ್ಯುತ್ ಪೂರೈಕೆ ಮಾಡುವ ಉದ್ದೇಶ ಸರಕಾರಕ್ಕಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ತಾಲೂಕು ಅಬ್ಬಲಗೆರೆ ಗ್ರಾಮದ ವ್ಯಾಪ್ತಿಯಲ್ಲಿನ ನೀರಾವರಿ ಇಲಾಖೆ ಹಾಗೂ ಈಶ್ವರವನ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಮಾಧ್ಯಮದ ಜತೆ ಮಾತನಾಡಿದರು. ಯಾವುದೇ ವ್ಯಕ್ತಿ ಪಂಚಾಯಿತಿಗೆ ದಾಖಲೆಗಾಗಿ ಬಂದರೆ ಅಲ್ಲಿ ವಿದ್ಯುತ್ ಇಲ್ಲ ಎಂದು ಹಿಂದೆ ಹೋಗಬಾರದು. ಈ ಕಾರಣದಿಂದ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗುವುದು. ಉನ್ನತ ದರ್ಜೆಯ ಸಂಸ್ಥೆ ಆಯ್ಕೆ ಮಾಡಿ ಈ ಕೆಲಸ ನೀಡಲಾಗುವುದು ಎಂದು ಸಚಿವರು ಹೇಳಿದರು.
ಸ್ವಚ್ಛಗ್ರಾಮ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲಾಗುವುದು. ಹೊಸದಾಗಿ ಜನಪ್ರತಿನಿಧಿಗಳು ಆಯ್ಕೆಯಾದ ಬಳಿಕ ಈ ಯೋಜನೆ ಜಾರಿಗೆ ಬರಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆದಾಯವನ್ನು ಆಯಾ ಗ್ರಾಮಪಂಚಾಯಿತಿಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಬಳಸಬೇಕೆಂದು ರಾಜ್ಯಸರಕಾರ ತೀರ್ಮಾನ ಮಾಡಿದೆ ಎಂದು ಹೇಳಿದರು
ಪರಿಸರ ಪೂರಕ ಅಭಿವೃದ್ಧಿ:
ಶಿವಮೊಗ್ಗ ನಗರದಲ್ಲಿ ರಸ್ತೆ,ಚರಂಡಿ ಕಟ್ಟಡ ಇಷ್ಟು ಮಾತ್ರ ಅಭಿವೃದ್ಧಿ ಅಲ್ಲ. ಇಲ್ಲಿನ ಜನರಿಗೆ ಉತ್ತಮ ಗಾಳಿ ,ಪರಿಸರದ ಉಪಯೋಗ ಆಗಬೇಕು. ಈ ನಿಟ್ಟಿನಲ್ಲಿ ರಾಗಿಗುಡ್ಡದಲ್ಲಿ ೨೨ ಎಕರೆ ಪ್ರದೇಶದಲ್ಲಿ ವನ ಅಭಿವೃದ್ಧಿ ಮಾಡಲಾಗುವುದು. ಶಿವಮೊಗ್ಗದ ಪರಿಸರ ಸಂಘಟನೆಗಳು ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿವೆ.ಅದಕ್ಕೆ ಪೂರಕವಾಗಿ ಸರಕಾರವೂ ಸ್ಪಂದಿಸಲಿದೆ ಎಂದು ಸಚಿವರು ಭರವಸೆ ನೀಡಿದರು. ಪರಿಸರವಾದಿ ಪ್ರೊ.ಬಿ.ಎಂ.ಕುಮಾರಸ್ವಾಮಿ, ಮಾತನಾಡಿ, ಶಿವಮೊಗ್ಗದ ರಾಗಿಗುಡ್ಡದಲ್ಲಿ ಜೈವಿಕ ವನ ಮಾಡಬೇಕು. ತುಂಗಾ ಚಾನೆಲೆ ಇಕ್ಕೆಲಗಳಲ್ಲಿ ಹಸಿರೀಕರಣ ಮಾಡೇಕು.ಮುಂದಿನ ದಿನಗಳಲ್ಲಿ ಶಿವನಮೊಗ್ಗದ ಉಷ್ಣಾಂಶವನ್ನು ೩೦ ಡಿಗ್ರಿ ಒಳಗೆ ತರುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅದ್ಯಕ್ಷ ಡಿ.,ಎಸ್.ಅರುಣ್, ಶಿವಮೊಗ್ಗ ನಂದನ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ನಾಗೇಶ್,ಪಾಲಿಕೆ ಸದಸ್ಯರು ಅಧಿಕಾರಿಗಳು ಹಾಜಿದ್ದರು.
previous post
next post