Malenadu Mitra
ಗ್ರಾಮಾಯಣ ಮಲೆನಾಡು ಸ್ಪೆಷಲ್ ರಾಜಕೀಯ ರಾಜ್ಯ

ಮಲೆನಾಡಿನಲ್ಲಿ ಬಿರುಸಿನ ಮತ ಸಂಭ್ರಮ

ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದೆ. ಚುನಾವಣೆಯನ್ನು ಪ್ರಜಾಪ್ರುತ್ವದ ಹಬ್ಬ ಎಂದು ಹೇಳುತ್ತೇವೆ. ಆದರೆ ಎಲ್ಲ ಚುನಾವಣೆಗಳಿಂದ ಲೋಕಲ್ ಫೈಟ್‌ನಲ್ಲಿ ಇದು ನಿಜ ಎನಿಸುತ್ತದೆ. ಸೀಮಿತ ಮತದಾರರಲ್ಲಿ ತಮ್ಮ ಪ್ರತಿನಿಧಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುವ ಈ ಚುನಾವಣೆಯಲ್ಲಿ ಮತದಾರರು ಸಂಭ್ರಮದಿAದಲೇ ಪಾಲ್ಗೊಳ್ಳುವುದು ವಿಶೇಷವಾಗಿದ

ಬಂಧುಬಳಗದಲ್ಲಿಯೋ , ಕೇರಿಯ, ಪಕ್ಕದ ಕೇರಿಯ ವ್ಯಕ್ತಿಗಳನ್ನು ಕಣಕ್ಕಿಳಿಸುವ ಜನರು ತಾವೇ ಚುನಾವಣೆಗೆ ಸ್ಪರ್ಧಿಸಿದ್ದೇವೆ ಎಂಬ ಸಂಭ್ರಮದಿAದ ಓಡಾಡುತ್ತಾರೆ. ಜಿಲ್ಲೆಯಲ್ಲಿ ಮತದಾನ ಸಾಕ್ಷÄ ಭರದಿಂದಲೇ ಶುರುವಾಗಿದೆ. ಒಂದು ಮತಕ್ಕೂ ಇಲ್ಲಿ ಬೆಲೆಯಿಂದ ಆ ಕಾರಣದಿಂದ ಹೆಣ್ಣು ಮಕ್ಕಳು ತವರಿಗೆ ಮತದಾನ ಮಾಡಲು ಬಂದಿದ್ದರೆ,ದೂರದ ಬೆಂಗಳೂರು, ಬಾಂಬೆ ಸೇರಿದಂತೆ ದೊಡ್ಡ ಪಟ್ಟಣಗಳಲ್ಲ ಕೆಲಸ ಮಾಡುವವರು ತಮ್ಮ ಊರಿಗೆ ಬಂದು ಮತದಾನದಲ್ಲಿ ತೊಡಗಿಕೊಂಡಿರುವ ದೃಶ್ಯ ಕಂಡು ಬಂದಿತು. ಅಂಗವಿಕಲರು, ವೃದ್ಧರು ಅತಿ ಉತ್ಸಾಹದಿಂದಲೇ ತಮ್ಮ ಮತಚಾಲಿಯಿಸುತ್ತಿದ್ದರು.

ಶಿವಮೊಗ್ಗ ತಾಲೂಕು ಉಂಬ್ಳೇಬೈಲು ಮತದಾನ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಭೇಟಿ ನೀಡಿ ಪರಿಶೀಲಿಸಿದರು.

ಈ ಬಾರಿ ಅಪರೂಪವಾಗಿದ್ದ ಚಳಿ ಮಂಗಳವಾರ ಮುಂಜಾನೆ ವಿಪರೀತವಾಗಿದ್ದ ಬಿಸಿಲು ಮೇಲೆಬಂದರೂ ಚಳಿ ಕಡಿಮೆಯಾಗಿರಲಿಲ್ಲ. ಕೊರೆವ ಚಳಿಯಲ್ಲೂ ಜನರು ತಮ್ಮ ಮತಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ತಾಲೂಕು ಹರಮಘಟ್ಟದ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು.

ವೃದ್ಧರನ್ನು ಮತದಾನ ಕೇಂದ್ರಕ್ಕೆ ಕರೆತಂದು ಎಚ್ಚರಿಕೆಯಿಂದ ಮತದಾನ ಮಾಡಿಸಿ ಮರಳಿ ಬಿಟ್ಟುಬರುತ್ತಿದ್ದ ದೃಶ್ಯ ಹೃದಯ ಕಂಡು ಬಂತು.

Ad Widget

Related posts

ಪುರದಾಳಲ್ಲಿ ವಿಜೃಂಬಣೆ ರಥೋತ್ಸವ , ಪ್ರೇಕ್ಷಕರ ಗಮನ ಸೆಳೆದ ಯಕ್ಷಗಾನ

Malenadu Mirror Desk

ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವು

Malenadu Mirror Desk

ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.