ಶಿವಮೊಗ್ಗದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ೪೫ ಸರಕಾರಿ ಶಾಲೆಗಳನ್ನು ೮.೫ ಕೋಟಿ ವೆಚ್ಚದಲ್ಲಿ ಡಿಜಿಟಲೀಕರಣಮಾಡಲಾಗಿದೆ. ಎಲ್ಲ ಶಾಲೆಗಳಿಗೆ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ ಕೆಲಸ ಪೂರ್ಣಗೊಂಡಿದೆ ಎಂದು ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ್ ಅವರು ಡಿ.೨೮ ರಂದು ಶಿವಮೊಗ್ಗ ನಗರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶಿವಮೊಗ್ಗ ಗೋಪಾಲಗೌಡ ಬಡಾವಣೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಜಿಲ್ಲೆಯ ಸಂಸದರು,ಶಾಸಕರುಗಳು ಈ ಸಭೆಯಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಮಾಸ್ತಾಂಬಿಕ ಉದ್ಯಾನ, ವೈದ್ಯಕೀಯ ಕಾಲೇಜಿನ ಉಪಕರಣ ಅಳವಡಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಉಪಕರಣ ಒದಗಿಸುವ ಯೋಜನೆಗಳನ್ನು ಒಟ್ಟು ೧೨.೬೧ ಕೋಟಿ ರೂ.ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ಯೋಗವನ, ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ಸುಂದರೀಕರಣ, ವೈದ್ಯಕೀಯ ಕಾಲೇಜಿನ ಮೊದಲ ಅಂತಸ್ತಿನ ಉಳಿದ ಕಾಮಗಾರಿ ಮತ್ತು ಹೊಳೆಬಸ್ ನಿಲ್ದಾಣ ಅಭಿವೃದ್ಧಿಗಾಗಿ ಒಟ್ಟು ೧೯ ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಈ ಎಲ್ಲಾ ಕಾಮಗಾರಿಗಳಿಗೆ ಅಂದು ಸಚಿವರು ಶಂಕುಸ್ಥಾಪನೆ ನೆರವೇರಿಸುವರು ಎಂದು ಸಚಿವ ಈಶ್ವರಪ್ಪ ಅವರು ವಿವರಿಸಿದರು,
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗಾಗಿ ಖರೀದಿಸಿರುವ ೫೧ ಆಟೋ ಟಿಪ್ಪರ್ ಗಳಿಗೆ ಚಾಲನೆ, ೭೦ ಶಾಲೆಗಳ ದುರಸ್ತಿ, ಪೂರ್ಣಗೊಂಡಿರುವ ೨೦ ಶೌಚಾಲಯಗಳ ಕಾಮಗಾರಿ ಸೇರಿದಂತೆ ೦ಟ್ಟು ೧೯.೫೩ ಕೋಟಿ ಮೊತ್ತದ ಕಾಮಗಾರಿಗಳನ್ನು ಸಚಿವರು ಲೋಕಾರ್ಪಣೆಗೊಳಿಸುವರು.
ಅದೇ ರೀತಿ ಮಹಾತ್ಮಗಾಂಧಿನಗರ್ ವಿಕಾಸ್ ಯೋಜನೆ ಅಡಿಯಲ್ಲಿ ೧೦೫ ಕೋಟಿ ರೂ. ಮೊತ್ತದ ೧೩೭ ಕಾಮಗಾರಿಗಳಿಗೆ ಸಚಿವ ಬೈರತಿ ಬಸವರಾಜ್ ಶಂಕುಸ್ಥಾಪನೆ ಮಾಡುವರು ಎಂದು ಸಚಿವರು ಹೇಳಿದರು.
ಮಹಾನಗರಪಾಲಿಕೆ ಮೇಯರ್ ಸುವರ್ಣಾಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಸದಸ್ಯ ಚನ್ನಬಸಪ್ಪ, ಜ್ಞಾನೇಶ್, ಆಯಕ್ತ ಚಿದಾನಂದ ವಟಾರೆ ಮತ್ತಿತರರು ಹಾಜರಿದ್ದರು,
previous post