ಕೋವಿಡ್ ಆತಂಕದ ನಡುವೆಯೇ ಶಿವಮೊಗ್ಗದಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ ನೆರವೇರಿತು. ಪ್ರತಿವರ್ಷ ರಾತ್ರಿ ಹನ್ನೆರಡು ಗಂಟೆಯಿAದ ವಿಜೃಂಭಣೆಯಿAದ ನಡೆಯುತ್ತಿದ್ದ ಕ್ರಿಸ್‌ಮಸ್ ಆಚರಣೆಯಲ್ಲಿ ಕಳೆದ ರಾತ್ರಿ ಬೇಗನೆ ಮುಗಿಸಲಾಯಿತು. ಕೊರೊನ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಭಕ್ತರ ಹೊರತಾಗಿ ಯಾರನ್ನೂ ಚರ್ಚ್ ಒಳಗೆ ಬಿಟ್ಟಿರಲಿಲ್ಲ. ಬಂದ ಎಲ್ಲರಿಗೂ ಥರ್ಮಲ್ ಸ್ಕಾö್ಯನ್ ಮಾಡಿದ್ದಲ್ಲದೆ, ಎಲ್ಲರಿಗೂ ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ನೆರವೇರಿಸಲಾಯಿತು.
ದೀಪಾಲಂಕಾರ:
ಶಿವಮೊಗ್ಗದ ಎಲ್ಲ ಚರ್ಚುಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಏಷ್ಯಾದ ಎರಡನೇ ಅತಿ ದೊಡ್ಡ ಚರ್ಚ್ ಎಂಬ ಖ್ಯಾತಿವೆತ್ತ ಸೇಕ್ರೇಡ್ ಹಾರ್ಟ್ ಚರ್ಚಿಗೆ ಮಾಡಿದ್ದ ದೀಪಾಲಂಕಾರ ಚಿತ್ತಾಕರ್ಷಕವಾಗಿತ್ತು. ಭಕ್ತರು ಅಲಂಕೃತ ಚರ್ಚ್ ಮುಂದೆ ನಿಂತು ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು.
ಶುಕ್ರವಾರ ಬೆಳಗ್ಗೆ ಕ್ರೆöÊಸ್ತ ಬಾಂಧವರು ಚರ್ಚ್ಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
previous post
next post