Malenadu Mitra
ರಾಜ್ಯ

ಬಂಗಾರಪ್ಪ ಸ್ಮರಣೆ ಕಾರ್ಯಕ್ರಮ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುಣ್ಯತಿಥಿ ಅಂಗವಾಗಿ ಅವರ ಕುಟುಂಬ ವರ್ಗದವರು ಶನಿವಾರ ಸೊರಬದ ಬಂಗಾರಧಾಮದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಮಾಜಿ ಶಾಸಕ ಮಧುಬಂಗಾರಪ್ಪ ,ಅನಿತಾ ಮಧುಬಂಗಾರಪ್ಪ, ಮೊಮ್ಮೊಗ ಸೂರ್ಯ ಹಾಗೂ ಬಂಗಾರಪ್ಪ ಅವರ ಬಂಧುಗಳೂ ಮತ್ತು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಭೀಮಣ್ಣನಾಯ್ಕ, ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಮಧುಬಂಗಾರಪ್ಪ ಅವರು, ಬಂಗಾರಪ್ಪಾಜಿ ಅವರ ಆದರ್ಶಗಳನ್ನು ಪರಿಪಾಲಿಸುವುದೇ ಅವರು ನಮಗೆ ಕೊಟ್ಟ ಸಂದೇಶವಾಗಿದೆ. ಅದರಂತೆ ನಾವೂ ಕೂಡಾ ಜನರೊಂದಿಗೆ ಇದ್ದು, ಅವರ ಆಶಯದಂತೆ ನಡೆಯುತ್ತಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಪ್ರಾಮಾಣಿಕ ಯುವ ಮುಂದಾಳುಗಳು ಹಿತೈಷಿಗಳು ಸ್ಪರ್ಧೆ ಮಾಡಿದ್ದು, ನಮ್ಮ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಿದರು. ಸಾಗರ ಕಾಂಗ್ರೆಸ್ ಮುಖಂಡ ಅಶೋಕ ಬರದಳ್ಳಿ, ಸೊರಬ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ.ಪಾಟೀಲ್, ಬಿಎಸ್.ಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ಬಂಗಾರಪ್ಪ ಅಭಿಮಾನಿಗಳ ಸಂಘದ ಎಚ್,ಗಣಪತಿ, ಕೆ.ಪಿ.ಗೌಡ್ರು ಸೊರಬ ತಾಲೂಕಿನ ನಾನಾ ಕಡೆಯಿಂದ ಬಂದಿದ್ದ ಅವರ ಅನುಯಾಯಿಗಳು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಜಿಲ್ಲೆಯಾದ್ಯಂತ ಬಂಗಾರಪ್ಪ ಅವರ ಸ್ಮರಣೆ ಕಾರ್ಯಕ್ರಮ ನೆರವೇರಿದವು. ಬಂಗಾರಪ್ಪ ಅವರ ಅಭಿಮಾನಿಗಳು ಹಾಗೂ ತಾಲೂಕು ಆರ್ಯ ಈಡಿಗ ಸಂಘಟನೆಗಳು ಎಂದೂ ಮರೆಯದ ನಾಐಕರ ಬಂಗಾಪರಪ್ಪ ಅವರ ಆದರ್ಶ, ರಾಜಕಾರಣ ಮತ್ತು ಅವರ ಬಡವರ ಪರ ಕಾರ್ಯಕ್ರಮಗಳನ್ನು ಸ್ಮರಿಸಿದರು.
ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘದಿAದ ಈಡಿಗ ಭವನದಲ್ಲಿ ಬಂಗಾರಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಪ್ರಮುಖರಾದ ಸುರೇಶ್ ಕೆ.ಬಾಳೇಗುಂಡಿ, ಎಸ್.ಸಿ.ರಾಮಚಂದ್ರ, ಕಾಗೋಡು ರಾಮಪ್ಪ ಮತ್ತಿತರರು ಭಾಗವಹಿಸಿದ್ದರು.

ಶಿವಮೊಗ್ಗ ಈಡಿಗ ಭವನದಲ್ಲಿ ಬಂಗಾರಪ್ಪ ಪುಣ್ಯ ಸ್ಮರಣೆ

Ad Widget

Related posts

ಮೆಗ್ಗಾನ್ ಆಸ್ಪತ್ರೆಯಲ್ಲಿ ಮುರುಘಾ ಶರಣರಿಗೆ ಚಿಕಿತ್ಸೆ

Malenadu Mirror Desk

ಪ್ರೀತಿ ಮತ್ತು ಕಾಳಜಿಯಿಂದ ಪರಿಸರ ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕು : ಆರಗ ಜ್ಞಾನೇಂದ್ರ

Malenadu Mirror Desk

ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಜಿಲ್ಲಾ ಕಾರ್ಯದರ್ಶಿ ಸೆಲ್ವಕುಮಾರ್ ಸೂಚನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.