ಶಿವಮೊಗ್ಗ. ಡಿ.30: ರಾಜಧಾನಿ ಬೆಂಗಳೂರನ್ನು ಆವರಿಸಿರುವ ಬ್ರಿಟನ್ ವೈರಸ್ ಸಿ.ಎಂ.ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿದೆ.
ಡಿಸೆಂಬರ್ 21 ರಂದು ಶಿವಮೊಗ್ಗ ಕ್ಕೆ ಬಂದಿದ್ದ ಒಂದೇ ಕುಟುಂಬಕ್ಕೆ ಸೇರಿದ ಗಂಡ, ಹೆಂಡತಿ ಮತ್ತು ಅವರ ಇಬ್ಬರು ಮಕ್ಕಳಲ್ಲಿ ಬ್ರಿಟನ್ ವೈರಸ್ ಇರುವುದು ಖಚಿತಪಟ್ಟಿದೆ.
ಇಲ್ಲಿನ ಸಾವರ್ಕರ್ ನಗರ ನಿವಾಸಗಳಾದ ಇವರನ್ನು ಇಲ್ಲಿಗೆ ಬಂದಾಗಲೇ ತಪಾಸಣೆಗೆ ಒಳಪಡಿಸಲಾಗಿತ್ತು. ಆಗ ಅವರಲ್ಲಿ ಕೊರೋನಾ ವೈರಸ್ ಇರುವುದು ಪತ್ತೆಯಾಗಿತ್ತು. ಇವರ ಜೊತೆಗೆ ಭದ್ರಾವತಿ ಮೂಲದ ಮತ್ತೋರ್ವ ಮಹಿಳೆಗೂ ಕೊರೋನಾ ದೃಢಪಟ್ಟಿತ್ತು. ಇವರನ್ನೆಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಐವರ ರಕ್ತ ಮತ್ತು ಸ್ವಾಬ್ ಮಾದರಿಯನ್ನು ಪುಣೆ ವೈರಾಣು ಲ್ಯಾಬ್ ಗೆ ಬ್ರಿಟನ್ ವೈರಸ್ ಪತ್ತೆ ಗಾಗಿ ಕಳುಹಿಸಲಾಗಿತ್ತು.
ಈ ಪೈಕಿ ಭದ್ರಾವತಿ ಮಹಿಳೆ ಹೊರತುಪಡಿಸಿ ಉಳಿದ ಒಂದೇ ಕುಟುಂಬದ ನಾಲ್ವರಲ್ಲಿ ಬ್ರಿಟನ್ ವೈರಸ್ ಇರುವುದಾಗಿ ವರದಿ ಬಂದಿದೆ.
ಬ್ರಿಟನ್ ವೈರಸ್ ಪತ್ತೆಯಾದ ಕುಟುಂಬದ ಸಂಪರ್ಕಕ್ಕೆ ಬಂದಿದ್ದ ಅವರ ಸಹೋದರನನ್ನು ಕೂಡ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.
ಬ್ರಿಟನ್ ವೈರಸ್ ಪತ್ತೆಯಾದವರ ಮನೆಯನ್ನು ಡಿ.21 ರಂದೇ ಸ್ಯಾನಿಟೈಸ್ ಮಾಡಲಾಗಿತ್ತು. ಹಾಗೂ ಇಂದು ಸೀಲ್ ಡೌನ್ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ಬ್ರಿಟನ್ ನಿಂದ ಒಟ್ಟು 23 ಮಂದಿ ಬಂದಿದ್ದು ಇವರನ್ನೆಲ್ಲ ಕೊರೋನಾ ಪರೀಕ್ಷೆ ಗೆ ಒಳಪಡಿಸಲಾಗಿತ್ತು. ಪ್ರಸ್ತುತ ಕೋವಿಡ್-19 ದೃಢಪಡದವರನ್ನೆಲ್ಲಾ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
previous post
next post