ಶಿವಮೊಗ್ಗದಲ್ಲಿ ಬಹುನಿರೀಕ್ಷಿತ ರಾಜ್ಯ ಬಿಜೆಪಿಯ ವಿಶೇಷ ಸಭೆ ಆರಂಭವಾಗಿದೆ. ಪ್ರೇರಣಾ ಕನ್ವೆನ್ಶನ್ ಹಾಲ್ ಮುಂಭಾಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಜಗದೀಶ್ ಶೆಟ್ಟರ್, ರಾಜ್ಯಾಧ್ಕ್ಷ ನಳೀನಕುಮಾರ್ ಕಟೀಲ್, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಅನೇಕ ಸಚಿವರು, ಶಿವಮೊಗ್ಗ ಸಂಸದ ರಾಘವೇಂದ್ರ, ಸಚಿವರ ಈಶ್ವರಪ್ಪ , ಶಾಸಕರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಅಶೋಕ್ ನಾಯ್ಕ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿದ್ದಾರೆ.
ಸಭೆಯಲ್ಲಿ ಜನಸಂಘದದಿಂದ ಈ ವರೆಗೂ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಸೇವೆ ಸಲ್ಲಿಸುತ್ತಿರುವ ಅನೇಕ ಮುಖಂಡರು ಭಾಗವಹಿಸಿದ್ದರು. ಇಡೀ ಪ್ರೇರಣಾ ಹಾಲ್ ಹಾಗೂ ಹೊರಾಂಗಣದಲ್ಲಿ ಬಿಜೆಪಿಯ ವೈಭವವೇ ಸೃಷ್ಟಿಯಾಗಿದೆ.
ಆತಿಥ್ಯ:
ಸ್ಥಳೀಯ ಕಾರ್ಯಕರ್ತರು ಹೊರಗಿನಿಂದ ಬಂದ ಅತಿಥಿಗಳಿಗೆ ಮಲೆನಾಡಿನ ಹೃದಯಸ್ಪರ್ಶಿ ಆತಿಥ್ಯ ನೀಡುತ್ತಿದ್ದಾರೆ. ಅತಿಥಿಗಳು ಮಲೆನಾಡಿನ ಆತಿಥ್ಯಕ್ಕೆ ಮಾರುಹೋಗಿದ್ದಾರೆ. ಶನಿವಾರ ರಾತ್ರಿ ಉತ್ತಮ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಮಲೆನಾಡಿನ ಕಲೆ ಸಂಸ್ಕøತಿಗೆ ಮನ್ನಣೆ ನೀಡಲಾಗಿತ್ತು