ವಿದ್ಯಾಗಮ ಪ್ರಾರಂಭವಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು ಶಿಕ್ಷಕರಲ್ಲಿ ಕೊರೊನ ಪಾಸಿಟಿವ್ ವರದಿಯಾಗಿದೆ.
ಶಿವಮೊಗ್ಗ ತಾಲೂಕು ಅನುಪಿನ ಕಟ್ಟೆ ಶಾಲೆ ಹಾಗೂ ಶರಾವತಿ ನಗರದ ಆದಿಚುಂಚನಗರಿ ಹೈಸ್ಕೂಲ್ ಶಿಕ್ಷಕರಲ್ಲಿ ಪಾಸಿಟವ್ ವರದಿ ಬಂದಿದೆ. ಭದ್ರಾವತಿಯ ಹೊಸೂರು ತಾಂಡ ಹಾಗೂ ನ್ಯೂಟೌನ್ ಹೈಸ್ಕೂಲ್ ಶಿಕ್ಷಕಿಗೆ ಕೊರೊನ ಪಾಸಿಟಿವ್ ಬಂದಿದೆ.
ಶಿಕ್ಷಕರಿಗೆ ಕೊರೊನ ಪರೀಕ್ಷೆ ಮಾಡಿಸಲಾಗುತ್ತಿದ್ದು, ನೆಗೆಟಿವ್ ವರದಿ ಬಂದವರು ಮಾತ್ರ ಶಾಲೆಗೆ ಬರುತ್ತಾರೆ. ಪಾಸಿಟಿವ್ ಬಂದವರು ಶಾಲೆಗೆ ಬರುವುದಿಲ್ಲ ಎಂದು ಡಿಡಿಪಿಐ ರಮೇಶ್ ಸ್ಪಷ್ಟಪಡಿಸಿದ್ದಾರೆ.
previous post
next post