Malenadu Mitra
Uncategorized

ಗಣರಾಜ್ಯೋತ್ಸವ ಪರೇಡ್‌ಗೆ ರಂಗಾಯಣ ತಂಡ

ಶಿವಮೊಗ್ಗ ರಂಗಾಯಣದ ಕಲಾವಿದರ ತಂಡ ಈ ಬಾರಿ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೀತ್ಸವ ಪರೇಡ್‌ನಲ್ಲಿ ಭಾಗವಸಲಿದೆ. ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ನಿರ್ದೇಶನದಲ್ಲಿ ಕರ್ನಾಟಕ ಚರಿತ್ರೆ ಬಿಂಬಿಸುವ ವಿಜಯನಗರ ಸಂಸ್ಥಾನ ಕುರಿತ ಸ್ಥಬ್ಧ ಚಿತ್ರದಲ್ಲಿ ಶಿವಮೊಗ್ಗ ರಂಗಾಯಣದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ರಂಗಾಯಣ ನಿರ್ದೇಶಕ ಸಂದೇಶ ಜವಳಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಬಾರಿ ರಂಗಾಯಣ ರೆಪರ್ಟರಿಯ ಎರಡನೇ ಪ್ರಯೋಗಕ್ಕೆ ಹಕ್ಕಿ ಕಥೆ ನಾಟಕ ಆಯ್ಕೆಮಾಡಿಕೊಳ್ಳಲಾಗಿದೆ.ಖ್ಯಾತ ಸಾಹಿತಿ ನಾ ಡಿಸೋಜಾ ಅವರ ಕಾದಂಬರಿ ಹಾಗೂ ಮಾಲತಿ ಸಾಗರ್ ಅವರ ಹಕ್ಕಿಗೊಂಡು ಗೂಡು ಕೊಡಿ ನಾಟಕ ಆಧಾರಿತವಾಗಿ ಹಕ್ಕಿ ಕಥೆ ರೂಪುಗೊಂಡಿದೆ ಎಂದು ಹೇಳಿದರು.
ಜನವರಿ ೮ ಮತ್ತು ೯ ರಂದು ನಾಟಕ ಪ್ರದರ್ಶನ ನಡೆಯಲಿದೆ. ನಾಟಕವನ್ನು ಗಣೇಶ್ ಮಂದಾರ್ತಿ, ಶ್ರವಣ್ ಹೆಗ್ಗೋಡು ನಿರ್ದೇಶಿಸಿದ್ದಾರೆ ಎಂದು ಹೇಳಿದರು.
ರಂಗಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ, ವಾರ್ತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.

Ad Widget

Related posts

ಬಜೆಟ್ನಲ್ಲಿ ಅನುದಾನ ಮೀಸಲಿಡಿ

Malenadu Mirror Desk

ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

ರೈತರಿಗೆ ಒಂದಿಂಚು ಭೂಮಿ ನೀಡುವ ಕಾರ್‍ಯಕ್ರಮ ನೀಡದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದ್ದು :ಕಾಗೋಡು ತಿಮ್ಮಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.