ಕೊರೊನ ಭಯದ ಬೆನ್ನಲ್ಲೇ ಅಲ್ಲಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಹೀಗಿರುವಾಗ ಶಿವಮೊಗ್ಗದಲ್ಲಿ ನಾಲ್ಕೈದು ಹಕ್ಕಿಗಳು ಸತ್ತಿದ್ದು,ಆತಂಕಕ್ಕೆ ಕಾರಣವಾಗಿದೆ.
ಶಿವಮೊಗ್ಗದ ಸವಳಂಗ ರಸ್ತೆ ಪಕ್ಕದ ರೋಟಿಯುವ ಕೇಂದ್ರ ಮತ್ತದರ ಪಕ್ಕದ ಪಾರ್ಕಿನಲ್ಲಿ ಐದಕ್ಕೂ ಹೆಚ್ಚು ಹಕ್ಕಿಗಳು ಸತ್ತು ಬಿದ್ದಿರುವುದು ನಾಗರಿಕರಲ್ಲಿ ಗಾಬರಿ ಹುಟ್ಟಿಸಿದೆ. ಈ ಹಕ್ಕಿಗಳ ಕಳೇಬರ ಕಂಡು ಸಾರ್ವಜನಿಕರು ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
ಬುಧವಾರ ರಾತ್ರಿ ಅಕಾಲಿಕವಾಗಿ ಸುರಿದ ಮಳೆಗೂ ಹಕ್ಕಿಗಳು ಸತ್ತಿರುವ ಅನುಮಾನವಿದ್ದು, ಪರೀಕ್ಷೆ ನಂತರವಷ್ಟೇ ಸತ್ಯಬೆಳಕಿಗೆ ಬರಬೇಕಿದೆ
previous post
next post