ಕುರುಬ ಸಮಾಜವನ್ನು ಎಸ್ಟಿಗೆ ವರ್ಗಕ್ಕೆ ಸೇರಿಸಬೇಕೆಂಬ ಹೋರಾಟದ ಶಿವಮೊಗ್ಗ-ಚಿಕ್ಕಮಗಳೂರು ವಿಭಾಗ ಮಟ್ಟದ ಸಮಾವೇಶ ಶಿಕಾರಿಪುರದಲ್ಲಿ ಗುರುವಾರ ನಡೆಯಿತು. ಕುರುಬ ಸಮಾಜದ ಈಶ್ವರಾನಂದಪುರ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎಂ.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್,ಕೆ.ಇ.ಕಾಂತೇಶ್, ಸ್ಥಳೀಯ ಮುಖಂಡರಾದ ಎಸ್.ಪಿ.ಶೇಷಾದ್ರಿ, ಪಾಲಾಕ್ಷಿ, ಗೋಣಿ ಮಾಲತೇಶ್, ಹೋರಾಟ ಸಮಿತಿಯ ಮುಕುಡಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು
previous post
next post