ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಶಿವಮೊಗ್ಗದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಪ್ರತಿಭಟನಾ ಸಭೆ ನಡೆಸಿತು. ಉತ್ತರ ಪ್ರದೇಶದಲ್ಲಿ ದೆಹಲಿಯ ನಿರ್ಭಯಾ ಮಾದರಿಯ ಪ್ರಕರಣಗಲು ನಡೆಯುತ್ತಿವೆ. ಅಲ್ಲಿನ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಅತ್ಯಾಚಾರಿಗಳನ್ನು ರಕ್ಷಣೆ ಮಾಡುತ್ತಿದೆ. ಅರ್ಚಕರು ಮತ್ತವರ ಸಹಚರರು ನಡೆಸಿದ ಅಮಾನವೀಯ ಘಟನೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಬದ್ಧವಾಗಿ ನಡೆದುಕೊಳ್ಳದ ಅಲ್ಲಿನ ರಾಜ್ಯಸರಕಾರವನ್ನು ಅಮಾನತುಗೊಳಿಸಬೇಕೆಂದು ಒಕ್ಕೂಟ ಜಿಲ್ಲಾಧಿಕಾರಿಗಳು ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಹೆಚ್.ಆರ್.ಬಸವರಾಜಪ್ಪ, ಕೆ.ಎಲ್.ಅಶೋಕ್, ಅನಿಲ್ ಕುಮಾರ್, ಹಾಲೇಶಪ್ಪ,ಶಿವಕುಮಾರ್, ಆರ್.ಕುಮಾರ್, ಖಾಸಿಂ, ಮಲ್ಲಿಕಾಜರ್ುನ ಮತ್ತಿತರರು ಭಾಗವಹಿಸಿದ್ದರು
previous post
next post