ರಾಜ್ಯಮಟ್ಟದ ಬೂಮಣ್ಣಿ ಚಿತ್ತಾರ ಸ್ಪಧರ್ೆಯ “ಚಿತ್ತಾರಗಿತ್ತಿ ಪ್ರಶಸ್ತಿ ” ಪ್ರದಾನ ಸಮಾರಂಭ ಜ.10 ರಂದು ಶಿವಮೊಗ್ಗ ಈಡಿಗ ಭವನದಲ್ಲಿ ಬೆಳಗ್ಗೆ 10.30 ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಸಾಗರ ಶಾಸಕ ಹರತಾಳು ಹಾಲಪ್ಪ , ಮಾಜಿ ಸಚಿವ ಹಾಗೂ ಸೊರಬ ಶಾಸಕ ಕುಮಾರ್ ಬಂಗಾರಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ, ಮಾಜಿ ಶಾಸಕ ಹಾಗೂ ಈಡಿಗ ಸಂಘದ ಗೌರವ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಆಗಮಿಸುವರು. ಉದ್ಯಮಿ ಸುರೇಶ್ ಕೆ ಬಾಳೇಗುಂಡಿ, ಪತ್ರಕರ್ತ ನಾಗರಾಜ್ ನೇರಿಗೆ ಉಪಸ್ಥಿತರಿರುವರು.
ಧೀರ ದೀವರ ಬಳಗ, ಮಲೆನಾಡು ದೀವರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಕಾಗೋಡಿನ ರಾಮಮನೋಹರ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಹಸೆ ಚಿತ್ರಕಲಾವಿದರಾದ ಗೌರಮ್ಮ ಹುಚ್ಚಪ್ಪ ಮಾಸ್ತರ್, ಈಶ್ವರ್ ನಾಯ್ಕ್ ಹಸುವಂತೆ, ರಾಧಾ ಸುಳ್ಳೂರು, ಕುಸುಮಾ ಅಣ್ಣಪ್ಪ ಅವರುಗಳನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭ ಬೂಮಣ್ಣಿ ಬುಟ್ಟಿ ಪ್ರದರ್ಶನ ಕೂಡಾ ನಡೆಯಲಿದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
previous post
next post