ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಇದು ರೈತರ ಆಸ್ತಿ.. ರೈತರ ಸಮಸ್ಯೆಗಳನ್ನ ಪರಿಹಾರ ಮಾಡುವುದು ಮುಖ್ಯ, ಈ ಬಾರಿ ಬಜೆಟ್ ನಲ್ಲಿ ಕಾಡ ಕ್ಕೆ ಅವಮಾನ ಮಾಡದ ರೀತಿಯಲ್ಲಿ ಇಂತಿಷ್ಟು ಹಣ ನಿಗದಿ ಪಡಿಸಿ ಬಿಡುಗಡೆ ಮಾಡಬೇಕೆಂದು ಪತ್ರ ಬರೆಯಲಾಗಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದ್ದಾರೆ
ನಗರದ ಪತ್ರಿಕಾ ಭವನದಲ್ಲಿ ಅಯೋಜನೆ ಮಾಡಲಾಗಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು ಶ್ರೀರಾಮನಿಗೆ ಪಟ್ಟಾಭಿಷೇಕದ ಹಾಗೇ ನನಗೆ ಕಾಡ ಅಧ್ಯಕ್ಷ ಪಟ್ಟ ಸಿಕ್ಕಿದೆ.,ರೈತರಿಗೆ ಅನೂಕೂಲ ಆಗುವ ನಿಟ್ಟಿನಲ್ಲಿ ಅವರ ಕೂಂದು ಕೊರತೆಗಳನ್ನ ಅಲಿಸಲಾಗುತ್ತಿದೆ. ನನಗೆ ಈಗ 62 ವರ್ಷ ವಯಸ್ಸು ನನ್ನ ಪ್ರಾಣ ಇರುವವರೆಗೂ ನಾನು ರೈತರ ಪರವಾಗಿ ಇರುತ್ತೇನೆ. ರೈತರ ಸಮಸ್ಯೆಗಳನ್ನು ಕೇಲುವ ಸಂರ್ಧಭದಲ್ಲಿ 40 ಕೋಟಿಯಷ್ಟು ಕೆಲಸ ಆಗುವ ಕಾಮಗಾರಿ ಅರ್ಜಿಗಳು ನಮಗೆ ಬಂದಿವೆ. ಸಿಎಂ ಬಳಿ ಹಾಗೂ ನೀರಾವರಿ ಸಚಿವರ ಬಳಿ ಹೋಗಿ 400 ಕೋಟಿಯಷ್ಟು ಆಗುವ ಕಾಮಗಾರಿಗಳ ಪ್ರಪೋಸಲ್ ಅನ್ನು ನೀಡಲಾಗಿದೆ ಎಂದ್ರು. ಇನ್ನು .ಜಿಲ್ಲಾ ಪಂಚಾಯತ್ ನಿಂದ ಒಂದೊಂದು ಗ್ರಾಮ ಪಂಚಾಯತ್ ಗೆ 15 ಲಕ್ಷ ಅನುದಾನವನ್ನ ನೀಡಿ ಎಂದು ಸಿಈಓಗೆ ಮನವಿ ಮಾಡಿದ್ದೆ. ಉದ್ಯೋಗ ಖಾತ್ರಿಯಲ್ಲಿ ಕಾಲುವೆಯಲ್ಲಿ ಸಿಲ್ಟ್ ತಗೆಯಲಾಗುತ್ತಿದೆ..ಇದುವರೆಗೂ ನಾನು ಯಾವ ಜಾತಿ ಎಂದು ಹೇಳಿಲ್ಲ, ನಾನು ರೈತರ ಜಾತಿ..ನಿಗಮ ಮಂಡಳಿ ಅಧ್ಯಕ್ಷರಾದ ಬಳಿಕ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿದ್ದನ್ನು ನೋಡಿದ್ದೇನೆ. ನಡೆದುಬಂದ ದಾರಿಯನ್ನ ನಾನು ಎಂದಿಗೂ ಮರೆಯುವುದಿಲ್ಲ..25 ವರ್ಷಕ್ಕೆ ನಾನೂ ರೈತ ಸಂಘದಲ್ಲಿ ಸಕ್ರೀಯವಾಗಿದ್ದೆ. ನಮ್ಮ ಮನೆಯಲ್ಲಿ ನನಗೆ ಸಾಕಷ್ಟು ಸಹಕಾರಿ ಸಿಕ್ಕಿದೆ.. ಇದುವರೆಗೂ ನಾನು ಚಿತ್ರಮಂದಿರಗಳಲ್ಲಿ ಚಲನಚಿತ್ರ ನೋಡಿಲ್ಲ, ಅದ್ದೂರಿ ಮದುವೆ ಮಾಡಿಲ್ಲ. 4 ಎಕರೆ ಒಳಗೆ ಇರುವ ರೈತರ ಜಮೀನಿನಲ್ಲಿ ಸಿಪೇಜ್ ತೆಗೆಯಲು ಕಾಡದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ..ಸೀನಿಯಾರಿಟಿ ಮೂಲಕ ರೈತರ ಜಮೀನಿನಲ್ಲಿ ಸೀಪೆಜ್ ಮಾಡಲಾಗುತ್ತದೆ ಎಂದ್ರು..