ಕನರ್ಾಟಕ ರಕ್ಷಣಾವೇದಿಕೆ ಸಂಪೂರ್ಣ ಪುನಾರಚನೆ ಮಾಡುವ ಉದ್ದೇಶವಿದ್ದು, ಜನವರಿ 17 ರಂದು ಬಳ್ಳಾರಿಯಲ್ಲಿ ನೂತನ ಸಮಿತಿ ಆಯ್ಕೆ ನಡೆಯಲಿದೆ ಎಂದು ಕರವೇ ರಾಜ್ಯಾದ್ಯಕ್ಷ ಪ್ರವೀಣ ಶೆಟ್ಟಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ಘಟಕಗಳ ಬದಲಾವಣೆ ಆಗಲಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಯಾವುದೇ ಜಾತಿ ಧರ್ಮ ಬೇಧ ಭಾವ ಮಾಡದೆ ಕೇವಲ ಭಾಷೆಯ ಅಸ್ಮಿತೆಗಾಗಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. ನೆಲಜಲ ಹಾಗೂ ಭಾಷೆಯ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಂಘಟನೆ ಮತ್ತಷ್ಟು ಬಲಗೊಳ್ಳಬೇಕು. ಕನ್ನಡಿಗರ ಕೈಗೆ ಈ ರಾಜ್ಯದ ಆಡಳಿತ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ಜನಪೊರ ಸಂಘಟನೆಗಳೊಂದಿಗೆ ಸೇರಿ ರಾಜಕೀಯ ಶಕ್ತಿ ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿ
ಶಿವಮೊಗ್ಗ ಜಿಲ್ಲೆಯಲ್ಲಿಯೂ ಕರವೇ ಸಂಘಟನೆ ಬಲಗೊಳ್ಳಬೇಕಿದೆ. ಹೀಗಾಗಿದೆ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದ ಪ್ರವೀಣ ಶೆಟ್ಟಿ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗ ಬೇಕು. ಅನ್ಯ ಭಾಷಿಕರಿಗೆ ಇಲ್ಲಿನ ಉದ್ಯೋಗ ಕೊಡುವುದನ್ನು ವಿರೋಧಿಸಬೇಕಾಗಿದೆ. ಖಾಸಗಿ ಕಂಪನಿಗಳು ಇಲ್ಲಿನ ಸಂಪನ್ಮೂಲ ಬಳಸಿಕೊಂಡು ಅನ್ಯ ಭಾಷಿಕರಿಗೆ ಉದ್ಯೋಗ ಕೊಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಮಂಜುನಾಥ್, ಅನಿಲ್, ಮುರಳಿ, ಲೋಹಿತ್ ಮತ್ತಿತರರು ಹಾಜರಿದ್ದರು.
previous post
next post