Malenadu Mitra
ರಾಜ್ಯ ಶಿವಮೊಗ್ಗ

ಹುಣಸೋಡಲ್ಲಿ ಭಾರೀ ಸ್ಫೋಟ ಆರು ಕಾರ್ಮಿಕರ ದುರ್ಮರಣ

ಸ್ಫೋಟದ್ದೇ ಶಬ್ಧ, ಭೂಕಂಪನದ ಅನುಭವ
ಶಿವಮೊಗ್ಗಸಮೀಪದ ಅಬ್ಬಲಗೆರೆ -ಹುಣಸೋಡು ಬಳಿ ಸಂಭವಿಸಿದ ಭಾರೀ ಸ್ಫೋಟದಿಂದ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಊರುಗಳಲ್ಲಿ ಭೂಕಂಪನದ ಅನುಭವ ಆಗಿದೆ. ಘಟನೆಯಲ್ಲಿ ಆರು ಮಂದಿ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.
ರಾತ್ರಿ ೧೦.೨೫ ರ ಸುಮಾರಿಗೆ ಇಡೀ ನಗರವೇ ಬೆಚ್ಚಿಬೀಳಿಸುವಂತಹ ಸ್ಫೋಟ ಸಂಭವಿಸಿದೆ. ನಗರದ ಜನರೆಲ್ಲ ಭೂಕಂಪವೇ ಆಗಿಹೋಯಿತೆಂದು ಮನೆಯಿಂದ ಹೊರ ಬಂದರು. ಬಂಧುಬಾಂದವರಿಗೆ ಫೋನ್ ಮಾಡಿ ಕ್ಷೇಮ ಸಮಾಚಾಋ ವಿಚಾರಿಸಕೊಂಡರು. ಸುಮಾರು ಅರ್ಧ ತಾಸು ಯಾರೂ ಮನೆಯ ಒಳಗೆ ಹೋಗದೆ ರಸ್ತೆಯಲ್ಲಿಯೇ ಕಾಲ ಕಳೆದಿದ್ದರು. ಆರಂಭದಲ್ಲಿ ಎಲ್ಲರೂ ಭೂ ಕಂಪನ ಎಂದೇ ಭಾವಿಸಿದ್ದರು. ಮಾಧ್ಯಮಗಳಲಿಯೂ ಅದೇ ಮಾದರಿಯ ಸುದ್ದಿಗಳು ಪ್ರಸಾರವಾದವು.

ಖಾಸಗಿ ಹೋಟೆಲ್ ಗೋಡೆ ಕಿತ್ತು ಬಿದ್ದಿರುವುದು


ಏನು ಘಟನೆ:
ಹುಣಸೋಡು ಸಮೀಪ ರೈಲ್ವೆ ಇಲಾಖೆ ಕಾಮಗಾರಿಗಾಗಿ ನಿರ್ಮಿಸಿರುವ ಕ್ರಷರ್‌ನಲ್ಲಿ ಸಂಭವಿಸಿದ ಸ್ಫೋಟದಿಂದಾಗಿಯೇ ಈ ರಣಭೀಕರ ಶಬ್ಧ ಬಂದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕ್ರಷರ್ ಸಮೀಪ ಭಾರೀ ಗಾತ್ರದ ಲಾರಿಯಲ್ಲಿ ಕ್ವಾರಿ ಕೆಲಸಕ್ಕೆ ಬಳಸುವ ಜಿಲೆಟಿನ್ ಕಟ್ಟಿ, ಕಚ್ಚಾ ಸಿಡಿಮದ್ದುಗಳನ್ನು ತುಂಬಿಡಲಾಗಿತ್ತು. ಈ ಲಾರಿಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದೆ. ಹಲವು ಬಾಂಬುಗಳನ್ನು ಒಂದೇ ಹಾಕಿದ ರೀತಿಯಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಈ ಬ್ಲಾಸ್ಟ್ ನಿಂದ ಸ್ಥಳದಲ್ಲಿದ್ದ ಬಿಹಾರ ರಾಜ್ಯಕ್ಕೆ ಸೇರಿರುವ ಸುಮಾರು ಆರು ಮಂದಿ ಕಾರ್ಮಿಕರು ಸ್ಥಳದಲ್ಲಿಯೇ ಸುಟ್ಟು ಭಸ್ಮವಾಗಿದ್ದರೆ. ಘಟನೆಯಲ್ಲಿ ಮತ್ತಷ್ಟು ಜೀವ ಹಾನಿಯಾಗಿರು ಸಾಧ್ಯತೆಗಳಿವೆ.

ಸ್ಫೋಟದಿಂದ ರಸ್ತೆ ಬಿರುಕು ಬಿಟ್ಟಿರುವುದು

ಸ್ಫೋಟದ ಕಾರಣಕ್ಕೆ ಶಿವಮೊಗ್ಗದ ಅನೇಕ ಕಟ್ಟಗಳಲ್ಲಿ ಬಿರುಕು ಬಂದಿದೆ. ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಶಾಂತರಾಜ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಘಟನೆ ಬಗ್ಗೆ ತನಿಖೆ:
ಸ್ಥಳಕ್ಕೆ ರೈಲ್ಷೆ ಇಲಾಖೆಗೆ ಸೇರಿದ ಅಧಿಕಾರಿಗಳೂ ಬಂದಿದ್ದು, ಘಟನೆ ಹೇಗಾಯಿತು ಎಂಬ ಬಗ್ಗೆ ತನಿಖೆಯಾದರಷ್ಟೆ ಸತ್ಯ ಹೊರಬೀಳಲಿದೆ. ಶಿವಮೊಗ್ಗ ಹೊರವಲಯದಲ್ಲಿ ಭಾರೀ ಪ್ರಮಾಣದ ಕಲ್ಲುಕ್ವಾರಿಗಳಿದ್ದು, ಮೊದಲಿಂದಲೂ ನಾಗರಿಕರು ಈ ಬಗ್ಗೆ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಸರಿಯಾದ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಇಂತಹ ಅನಾಹುತಗಳು ಸಂಭವಿಸುತ್ತಿವೆ. ಈ ಘಟನೆಯಿಂದ ಅಮಾಯಕ ಬಡ ಕೂಲಿ ಕಾರ್ಮಿಕರು ಜೀವ ಕಳೆದುಕೊಂಡಂತಾಯಿತು.

ರಿಪ್ಪನ್ ಪೇಟೆ ಸಮೀಪ ನೆಲಕ್ಕೆ ಬಿದ್ದ ಹೂಕುಂಡಗಳು

ದುರಂತದಲ್ಲಿ ಮೃತ ದೇಹಗಳು ಚಿದ್ರವಾಗಿದ್ದು ಆ ಚಿತ್ರ ನಾವು ಪ್ರಕಟಿಸುತ್ತಿಲ್ಲ

Ad Widget

Related posts

ದೇವಸ್ಥಾನಕ್ಕೆ ದೇಣಿಗೆ ನೀಡಿದ ಬಿಕ್ಷುಕಿ,ಆಂಜನೇಯನಿಗೆ ಬೆಳ್ಳಿ ಮುಖವಾಡ ಮಾಡಿಸಿ ಎಂದು ಅಜ್ಜಿ ನೀಡಿದ ಹಣ ಎಷ್ಟು ಗೊತ್ತಾ ?

Malenadu Mirror Desk

ಶಿವಮೊಗ್ಗ ನಗರಕ್ಕೇ ಸ್ಯಾನಿಟೈಜರ್ ಸ್ನಾನ!

Malenadu Mirror Desk

ಕೋಡಿಹಳ್ಳಿ ಚಂದ್ರಶೇಖರ್ ವಜಾ, ನೂತನ ಅಧ್ಯಕ್ಷರಾಗಿ ಬಸವರಾಜಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.