Malenadu Mitra
ರಾಜಕೀಯರಾಜ್ಯ

ಸಿದ್ದರಾಮಯ್ಯ ಅಭಿಮಾನಿ ಮಹಿಳೆ ಕೊಲೆ

ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಮೂವಳ್ಳಿಯ ಸಿದ್ದರಾಮಯ್ಯ ಅಪ್ಪಟ ಅಭಿಮಾನಿಯಾಗಿದ್ದ ವೃದ್ಧೆಯನ್ನು ಯಾರೊ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಚಿತ್ರದುರ್ಗ ಮೂಲದ ಶಾರದಮ್ಮ ಕರಿಯಣ್ಣ(೬೫) ಅವರು ಮೂವತ್ತು ವರ್ಷಗಳಿಂದ ಮೂವಳ್ಳಿಯಲ್ಲಿ ನೆಲೆಸಿದ್ದರು. ಮನೆಯ ಹಿಂದಿನ ಕಟ್ಟಿಗೆ ರಾಶಿಯಲ್ಲಿ ಶಾರಮ್ಮರ ಶವ ಪತ್ತೆಯಾಗಿದ್ದು, ಎರಡು ದಿನದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದೆ. ವೃದ್ಧೆಯ ಕಿವಿಯಲ್ಲಿನ ಓಲೆಯನ್ನು ಕಿತ್ತುಕೊಂಡು ಹೋಗಿದ್ದು, ಯಾರೊ ದರೋಡೆಕೋರರೇ ಈ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಊರೂರು ತಿರುಗಿ ಕಂಬಳಿ ವ್ಯಾಪಾರ ಮಾಡುತ್ತಿದ್ದ ಶಾರದಮ್ಮ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅಪಾರವಾದ ಗೌರವ ಮತ್ತು ಅಭಿಮಾನ ಹೊಂದಿದ್ದರು. ಇವರು ಸದಾ ಸಿದ್ದರಾಮಯ್ಯರನ್ನ ಕೊಂಡಾಡುತ್ತಿದ್ದ ಮತ್ತು ಅವರ ಆಡಳಿತವನ್ನು ಬಣ್ಣಿಸುತ್ತಿದ್ದ ಕಾರಣಕ್ಕಾಗಿಯೇ ಸುತ್ತಲಿನ ಹಳ್ಳಿಗಳಲ್ಲಿ ಜನಪ್ರಿಯರಾಗಿದ್ದರು. ಊರ ಮಂದಿ ಇವರನ್ನು ಸಿದ್ದರಾಮಣ್ಣ ಅಭಿಮಾನಿ ಶಾರದಕ್ಕ ಅಂತಾನೆ ಕರೀತಿದ್ರು. ಸ್ಥಳ ಮಹಜರು ನಡೆಸಿರುವ ಮಾಳೂರು ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ad Widget

Related posts

ಸಕ್ರೆಬೈಲು ಬಳಿ ಹೊತ್ತಿ ಉರಿದ ಖಾಸಗಿ ಬಸ್ : ಚಾಲಕನ ಸಮಯಪ್ರಜ್ಞೆಗೆ ಪ್ರಯಾಣಿಕರು ಸೇಫ್

Malenadu Mirror Desk

ಸ್ಟುಡಿಯೊ ತೆರೆಯಲು ಅವಕಾಶಕ್ಕೆ ಮನವಿ

Malenadu Mirror Desk

ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಸ್. ರಘುನಾಥ್ ಗೆಲ್ಲಿಸಬೇಕು : ಎಸ್. ದತ್ತಾತ್ರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.