ದೇಶಾದ್ಯಂತ ಅನ್ನದಾತರು ಬೀದಿಗಿಳಿದಿದ್ದರೆ, ಹೋರಾಟದ ನೆಲ ಶಿವಮೊಗ್ಗದಲ್ಲಿನ ರೈತರು ಸುಮ್ಮನಿರುತ್ತಾರೆಯೇ ?, ಇಲ್ಲಿಯೂ ಟ್ರಾಕ್ಟರ್‌ಗಳು ಬೀದಿಗಿಳಿದು ಸರಕಾರದ ರೈತವಿರೋಧಿ ಕಾಯಿದೆಗಳನ್ನು ಪ್ರಬಲವಾಗಿ ವಿರೋಧಿಸಿದರು.
ರೈತಸಂಘ, ಪ್ರಗತಿಪರ ಸಂಘಟನೆಗಳು ಹಾಗೂ ಬಿಜೆಪಿಯೇತರ ಪಕ್ಷಗಳ ಮುಖಂಡರುಗಳನ್ನೊಳಗೊಂಡ ಐಕ್ಯಹೋರಾಟ ಸಮಿತಿ ಅಡಿಯಲ್ಲಿ ರೈತ ಪರೇಡ್ ನಡೆಸಿ ಜಿಲ್ಲಾಧಿಕಾರಿ ಕಚೇರಿ ಹಿಂಭಾಗ ಬಹಿರಂಗ ಸಭೆ ನಡೆಸಿದರು.
ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ,ರೈತ ನಾಯಕ ಕೆ.ಟಿ.ಗಂಗಾಧರ್, ಸಿದ್ದನಗೌಡ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಕಲಗೋಡು ರತ್ನಾಕರ್, ಕೆ.ಪಿ.ಶ್ರೀಪಾಲ್, ದಸಂಸ ರಾಜ್ಯ ಸಂಚಾಲಕ ಗುರುಮೂರ್ತಿ, ಶಿವಾನಂದಕುಗ್ವೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಟ್ರಾಕ್ಟರ್ ಚಾಲನೆ ಮಾಡಿದ ರಾಜನಂದಿನಿ:
ಸಾಗರ ಕಾಂಗ್ರೆಸ್ ನಾಯಕಿ ಹಾಗೂ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರು ಶಿವಮೊಗ್ಗದ ಸೈನ್ಸ್ ಮೈದಾನದಿಂದ ಟ್ರಾಕ್ಟರ್ ಚಾಲನೆ ಮಾಡಿಕೊಂಡು ಬಂದು ಗಮನ ಸೆಳೆದರು. ಹಿರಿಯ ರಾಜಕೀಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪ ಕೂಡಾ ಸೈನ್ಸ್ ಮೈದಾನದಿಂದ ಟ್ರಾಕ್ಟರ್ ಮೇಲೆಯೇ ಕುಳಿತು ಚಿಂತನಾ ಸಭೆ ಸ್ಥಳಕ್ಕೆ ಬಂದು ತಮ್ಮಲ್ಲಿ ಇನ್ನೂ ಹೋರಾಟದ ಕೆಚ್ಚು ಇದೆ ಎಂಬುದನ್ನು ಸಾಬೀತುಪಡಿಸಿದರು.
previous post
next post