ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು ಐದು ಅಡಿಕೆ ಕಳ್ಳತನ ಪ್ರಕರಣಗಳನ್ನು ಬೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಹತ್ತು ಕ್ವಿಂಟಾಲ್ ಅಡಿಕೆ ಹಾಗೂ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ತೌಸಿಫ್ ಉಲ್ಲಾ,ಮಹಾಪೂಸ್, ಅಜೀಜ್ ಉಲ್ಲಾಖಾನ್ ಎಂಬ ತುಂಗಾನಗರ ಹಾಗೂ ಆರ್‌ಎಂಲ್ ನಗರದ ಆರೋಪಿಗಳನ್ನು ಬಂಧಿಸಲಾಗಿದೆ. ಎಸ್ಪಿ ಕೆ.ಎಂ.ಶಾಂತರಾಜ್ , ಅಡಷನಲ್ ಎಸ್ಪಿ ಶೇಖರ್, ಡಿವೈಎಸ್ಪಿ ಈಶ್ವನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ದೀಪಕ್, ಪಿಎಸ್‌ಐ ತಿರುಮಲೇಶ್ ತಂಡ ಈ ಕಾರ್ಯಾಚರಣೆ ಮಾಡಿದೆ. ಸಿಬ್ಬಂದಿಗಳಾದ ಸಯ್ಯದ್ ಇಮ್ರಾನ್, ರಾಜು, ಗುರುನಾಯಕ್, ಲಂಕೇಶ್ ಕುಮಾರ್ ಹಾಗೂ ಅರುಣ್ ಕುಮಾರ್ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಡಸ್ಟರ್ ಕಾರು ಹಾಗೂ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಇವರು ಕದ್ದಿರುವ ಅಡಿಕೆ ಮೌಲ್ಯ ಸುಮಾರು 4,25000 ಎಂದು ಅಂದಾಜಿಸಲಾಗಿದೆ
previous post
next post