ವಿನೋಬ ನಗರದ ದಾಮೋದರ ಕಾಲೋನಿಯಲ್ಲಿರುವ ಕರಿಯಣ್ಣ ಅಪಾರ್ಟ್ ಮೆಂಟ್‌ನ ಎರಡು ಮನೆಗಳಲ್ಲಿ ಬರೊಬ್ಬರಿ 11 ಲಕ್ಷ ರೂ.45 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ನಗದು ಕಳ್ಳತನವಾಗಿದೆ.
ಕರಿಯಣ್ಣ ರೆಸಿಡೆನ್ಸಿಯ ಫ್ಲಾಟ್ ನಂಬರ್ 2 ರಲ್ಲಿನ ನಿವಾಸಿ ಸುನೀಲ್ ಎಂಬುವವರು ಕುಟುಂಬಸ್ಥರೊಂದಿಗೆ ಜ.27 ರಂದು ಗೋವಾಕ್ಕೆ ತೆರಳಿದ್ದರು. ಶುಕ್ರವಾರ ಫ್ಲಾಟ್ ನ ಸೆಕ್ಯೂರಿಟಿ ಕುಬೇರಪ್ಪ ಸುನೀಲ್‌ಗೆ ಫೋನ್ ಮಾಡಿ ಮನೆ ಕಳುವಾದ ಸಂಗತಿ ತಿಳಿಸಿದ್ದಾರೆ.
ಮನೆಗೆ ಬಂದು ನೋಡಿದಾಗ ಆಯುಧದಿಂದ ಬಾಗಿಲು ಮೀಟಿ ಮುರಿದು ಒಳ ಪ್ರವೇಶ ಮಾಡಿದ ಕಳ್ಳರು, ಮನೆಯಲ್ಲಿ ಸುಮಾರು 7 ಲಕ್ಷದ 13 ಸಾವಿರ ರೂ.400 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಮತ್ತು ನಗದನ್ನು ದೋಚಿದ್ದಾರೆ. ಕಪಾಟಿನಲ್ಲದ್ದ 3 ಲಕ್ಷದ 60 ಸಾವಿರ ರೂ ಮೌಲ್ಯದ 90 ಗ್ರಾಂ ತೂಕದ ಎರಡು ಮಾಂಗಲ್ಯ ಸರ, 1 ಲಕ್ಷದ 20 ಸಾವಿರ ರೂ. ಮೌಲ್ಯದ 30 ಗ್ರಾಂನ 10 ಜೊತೆ ಕಿವಿ ರಿಂಗ್, 36 ಗ್ರಾಂ ತೂಕದ 9 ಉಂಗುರಗಳು, 32 ಸಾವಿರ ರೂ. ಮೌಲ್ಯದ ಮಕ್ಕಳ 4 ಜೊತೆ ಕಿವಿ ರಿಂಗ್, 40 ಸಾವಿರ ರೂ. ಮೌಲ್ಯದ ಕೊರಳ ಸರ, 14400 ರೂ. ಮೌಲ್ಯದ ಬೆಳ್ಳಿಯ ವಸ್ತುಗಳು 3000 ರೂ. ನಗದನ್ನ ಕಳವು ಮಾಡಲಾಗಿದೆ. ಈ ಕುರಿತು ಸುನೀಲ್ ದೂರಿನಲ್ಲಿ ದಾಖಲಿಸಿದ್ದಾರೆ.
ಮತ್ತೊಂದು ಮನೆ ಕಳ್ಳತನ:
ಅದೇ ಅಪಾರ್ಟ್‌ಮೆಂಟ್‌ನ ನಂಬರ್ 1 ರಲ್ಲಿದ್ದ ನರಸಿಂಹ ನಾರಾಯಣ ಭಟ್ ಫ್ಲಾಟ್‌ನಲ್ಲೂ ಕಳವಾಗಿದೆ. ತಮ್ಮ ಮಗನ ಮನೆಗೆ ಬೆಂಗಳೂರಿಗೆ ಹೋದಾಗ ಈ ಕಳವು ಘಟನೆ ನಡೆದಿದೆ. ಇವರ ಮನೆಯಲ್ಲಿಯೂ ಸಹ 4 ಲಕ್ಷದ 32ಸಾವಿರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನ ಕಳವು ಮಾಡಿಕೊಂಡು ಹೋಗಲಾಗಿದೆ.
ಇವರ ಮನೆಯಲ್ಲಿದ್ದ1ಲಕ್ಷದ 40 ಸಾವಿರ ರೂ. ಮೌಲ್ಯದ7 ಚಿನ್ನದ ಬಳೆಗಳು, 48 ಸಾವಿರ ರೂ ಮೌಲ್ಯದ ಬ್ರಾಸ್ ಲೈಟ್, 88 ಸಾವಿರ ರೂ.ಮೌಲ್ಯದ22 ಗ್ರಾಂ ಚಿನ್ನದ ಕೊರಳ ಚೈನು, 88ಸಾವಿರ ರೂ. ಮೌಲ್ಯದ ಕರಿಮಣಿಯುಳ್ಳ ಮಾಂಗಲ್ಯ ಸರ, 12 ಗ್ರಾಂ ಚಿನ್ನದ 2ಕಿವಿಯೋಲೆ ಗಳು 20ಸಾವಿರ ರೂ. ನಗದು ಕಳವಾಗಿದೆ ಎಂದು ಭಟ್ ನವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.