ಶಿವಮೊಗ್ಗ ಸಮೀಪದ ಮೇಲಿನ ಹನಸವಾಡಿ ಸಮೀಪ ಕಾರು ಹಿಂದಿಕ್ಕಲು ಹೋದ ಬೈಕ್ ರಾಜ್ಯ ರಸ್ತೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಯುವಕ ಮತ್ತು ಯುವತಿ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ಸೋಮವಾರ ನಡೆದಿದೆ.
ಹೊನ್ನಾಳಿ ತಾಲೂಕು ಬಾಗೋಡಿ ಗ್ರಾಮದ ರಘು ಹಾಗೂ ಸುಮ ಮೃತ ದುರ್ದೈವಿಗಳು. ಹನಸವಾಡಿ ಸಮೀಪ ಘಟನೆ ಸಂಭವಿಸಿದ್ದು, ಕಾರನ್ನು ಹಿಂದಿಕ್ಕಿ ಮುಂದೆ ಸಾಗುವಾಗ ದಾವಣೆಗೆರೆಗೆ ಹೋಗುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಸಿಪಿಐ ಹಾಗೂ ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್ ಭೇಟಿ ನೀಡಿದ್ದರು. ಗ್ರಾಮಾಂತರ ಠಾಣೆಯಲ್ಲ ದೂರು ದಾಖಲಾಗಿದೆ.
previous post
next post