ಸಾಧಿಸುವ ಛಲ ಇದ್ದರೆ ಸಾಮಾನ್ಯ ಮನುಷ್ಯನೂ ಕೂಡಾ ಮಹತ್ತರವಾದ ಸಾಧನೆ ಮಾಡಬಹುದು ಎಂಬುದಕ್ಕೆ ಜೆ.ಪಿ.ನಾರಾಯಣಸ್ವಾಮಿ ಉತ್ತಮ ಉದಾಹರಣೆ ಎಂದು ಜೆಪಿಪ್ರತಿಷ್ಠಾನದ ಜಿಲ್ಲಾ ಸಂಚಾಲಕ ತೇಕಲೆ ರಾಜಪ್ಪ ಹೇಳಿದರು.
ಅವರು, ಜೆ.ಪಿ.ನಾರಾಯಣ ಸ್ವಾಮಿ ಜಯಂತಿ ಅಂಗವಾಗಿ ಶಿವಮೊಗ್ಗ ತಾಲೂಕು ಪುರದಾಳು ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ “ಪರೀಕ್ಷೆ ಒಂದು ಹಬ್ಬ’ವಿಷಯ ಕುರಿತು ಮಾಹಿತಿ ನೀಡಿದರು. ಮಕ್ಕಳಿಗೆ ಗುರಿ ಇದ್ದರೆ ಅದಕ್ಕೆ ತಕ್ಕ ಗುರುಗಳ ಮಾರ್ಗದರ್ಶನ ಇದ್ದರೆ ಸಾಧನೆ ಸಿದ್ದಿಸುತ್ತದೆ. ಕಲಿಕೆಯಲ್ಲಿ ಶ್ರದ್ಧೆ ಇರಬೇಕು.ಪರೀಕ್ಷೆ ಎಂಬುದೂ ಒಂದು ಆಟ ಮತ್ತು ಹಬ್ಬ ಇದ್ದ ಹಾಗೆ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಪುರದಾಳು ಶಾಲೆಯಲ್ಲಿ ಸತತವಾಗಿ ಶೇ.೧೦೦ ಫಲಿತಾಂಶ ಗಳಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ವಿಶ್ರಾಂತ ಪ್ರಾಂಶುಪಾಲ ಹಿಳ್ಳೋಡಿ ಕೃಷ್ಣಮೂರ್ತಿ ಅವರು, ಮಕ್ಕಳು ಶಿಕ್ಷಣ ಸಮಸ್ಯೆ ,ಸವಾಲು ಹಾಗೂ ಮುಂದಿರುವ ಉಜ್ವಲ ಭವಿಷ್ಯದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಸತತ ಉತ್ತಮ ಫಲಿತಾಂಶಕ್ಕಾಗಿ ಶಾಲೆಯ ಎಲ್ಲ ಶಿಕ್ಷಕ ವರ್ಗದವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್, ಮುಖ್ಯೋಪಾಧ್ಯಾಯ ಪರಮೇಶ್ವರಪ್ಪ ಮತ್ತಿತರರು ಹಾಜರಿದ್ದರು.
ಜಯಂತಿ ಕಾರ್ಯಕ್ರಮ:
ಶಿವಮೊಗ್ಗದ ಈಡಿಗರ ಹಾಸ್ಟೆಲ್‌ನಲ್ಲಿ ಸಂಜೆ ಜೆಪಿಎನ್ ಅವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೇಕಲೆ ರಾಜಪ್ಪ ಅವರು ನಾರಾಯಣ ಸ್ವಾಮಿ ಅವರ ಜೀವನ ಸಾಧನೆ, ಉದ್ಯಮಿಯಾಗಿ ಅವರು ಕಂಡ ಯಶಸ್ಸು ಮತ್ತು ಸಾರ್ವಜನಿಕ ಸೇವೆಗಳ ಕುರಿತು ಮಾತನಾಡಿದರು. ಹಾಸ್ಟೆಲ್ ವಾರ್ಡನ್ ಕೃಷ್ಣಪ್ಪ ಅವರನ್ನು ಗೌರವಿಸಲಾಯಿತು. ವೆಂಕಟೇಶ್, ಹಿಳ್ಳೋಡಿ ಕೃಷ್ಣ ಮೂರ್ತಿ ,ರವಿ ಮತ್ತಿತರರು ಹಾಜರಿದ್ದರು.
previous post