ವಿದ್ಯಾರ್ಥಿಗಳಲ್ಲಿ ನಮ್ಮ ನಾಡಿನ ಶ್ರೀಮಂತ ಕಲೆ, ಸಾಹಿತ್ಯದ ಬಗ್ಗೆ ಹೆಚ್ಚು ಅಭಿರುಚಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಅವರು ಹೇಳಿದರು.
ಅವರು ಬುಧವಾರ ಶಿವಮೊಗ್ಗ ರಂಗಾಯಣದಲ್ಲಿ ಆಯೋಜಿಸಲಾಗಿದ್ದ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ನಾಡಿನ ಕಲೆ, ಸಂಸ್ಕøತಿಗಳು ಶ್ರೀಮಂತವಾಗಿದ್ದು, ಕಾಲಾತೀತವಾಗಿವೆ. ಕಲೆಗಳು ನಮ್ಮ ಗತ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿ ನಮ್ಮನ್ನು ಜಾಗೃತಗೊಳಿಸುತ್ತದೆ. ಇಂತಹ ಕಲೆ ಮತ್ತು ಸಂಸ್ಕøತಿಯಿಂದ ನಮ್ಮ ಮಕ್ಕಳು ಪ್ರೇರಣೆ ಪಡೆಯಬೇಕಾಗಿದೆ. ಕುವೆಂಪು ಅವರಂತಹ ಮಹಾನ್ ವ್ಯಕ್ತಿತ್ವದ ಬಗ್ಗೆ ಯುವ ಜನಾಂಗ ಹೆಚ್ಚೆಚ್ಚು ಅರಿತುಕೊಳ್ಳುವ ಅಗತ್ಯವಿದೆ. ರಂಗಾಯಣದಂತಹ ಸಂಸ್ಥೆಗಳು ಇದಕ್ಕೆ ವೇದಿಕೆಯನ್ನು ಒದಗಿಸಿಕೊಡಬೇಕು ಎಂದು ಅವರು ಹೇಳಿದರು.
15ದಿನಗಳ ಕಾಲ ನಡೆದ ಶಿಲ್ಪ ಕಲಾ ಶಿಬಿರದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಗೌರವ ಸಮರ್ಪಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಕಲೆಯ ಮೂಲಕ ಕರ್ನಾಟಕದ ಶ್ರೀಮಂತ ಸಂಸ್ಕøತಿಯನ್ನು ಇಲ್ಲಿ ಕಲಾವಿದರು ಅನಾವರಣಗೊಳಿಸಿದ್ದಾರೆ. ಶಿಲ್ಪಿಗಳು ತಮ್ಮ ಕೈಚಳಕದ ಮೂಲಕ ಎಲ್ಲಾ ಶಿಲ್ಪಗಳಿಗೆ ಜೀವ ತುಂಬಿದ್ದಾರೆ. ನಾಡಿನ ಕಲೆ, ಸಂಸ್ಕøತಿಯನ್ನು ಪ್ರತಿನಿಧಿಸುವ ಇಂತಹ ಕೆಲಸಗಳು ಹೆಚ್ಚಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಗಮನ ಸೆಳೆಯುವ ಶಿಲ್ಪಗಳು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಲ್ಪಕಲಾ ಶಿಬಿರದಲ್ಲಿ ವಿವಿಧ ಪ್ರಸಿದ್ಧ ನಾಟಕಗಳ ಪಾತ್ರಗಳ ಶಿಲ್ಪಗಳು, ಯಕ್ಷಗಾನ, ಭೂತದ ಕೋಲ ಮತ್ತು ಕಥಕ್ಕಳಿಯ ಪಾತ್ರಧಾರಿಗಳ ಶಿಲ್ಪಗಳು ಶಿವಮೊಗ್ಗ ರಂಗಾಯಣದ ಆವರಣದಲ್ಲಿ ಅನಾವರಣಗೊಳಿಸಲಾಗಿದ್ದ ನೋಡುಗರ ಗಮನ ಸೆಳೆಯುತ್ತಿವೆ.
ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಮಾ. ಅರ್ಕಸಾಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಿರ್ದೇಶಕ ಕೆ.ನಾರಾಯಣರಾವ್, ಸಂಚಾಲಕ ವಿಪಿನ್ ಭಧೌರಿಯಾ, ರಂಗಸಮಾಜ ಸದಸ್ಯ ಆರ್.ಎಸ್.ಹಾಲಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗೌರವ ಸಮರ್ಪಣೆ:
72ನೇ ಗಣರಾಜ್ಯೋತ್ಸವ ಅಂಗವಾಗಿ ರಾಜಪಥದಲ್ಲಿ ನಡೆದ ಸಮಾರಂಭ ವೇಳೆ ಕರ್ನಾಟಕದ ಸ್ಥಬ್ದಚಿತ್ರದೊಂದಿಗೆ ಕಲಾವಿದರಾಗಿ ಭಾಗವಹಿಸಿದ್ದ ಶಿವಮೊಗ್ಗ ರಂಗಾಯಣದ ಎಲ್ಲಾ 12ಮಂದಿ ಕಲಾವಿದರಿಗೆ ಗೌರವ ಸ್ಮರಣಕೆ ನೀಡಿ ಡಿ.ಎಚ್.ಶಂಕರಮೂರ್ತಿ ಅವರು ಈ ಸಂದರ್ಭದಲ್ಲಿ ಸನ್ಮಾನಿಸಿದರು.