ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ವೃತ್ತದ ವ್ಯಾಪ್ತಿಯ ರೌಡಿಗಳನ್ನು ಠಾಣೆಗೆ ಕರೆಸಿದ ಎಸ್ಪಿ ಶಾಂತರಾಜ್ ಅವರು ಖಡಕ್ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ನಗರದಲ್ಲಿ ಬಾರ್‌ಗಳ ಬಳಿ ಗಲಾಟೆ ಹಾಗೂ ಆಯುಧ ಸಾಗಿಸುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಡಿಎಆರ್ ಸಭಾಂಗಣದಲಿ ರೌಡಿ ಪರೇಡ್ ನಡೆಸಿದ ಎಸ್ಪಿ ರೌಡಿಗಳಿಗೆ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಡ್ಯಾನ್ಸ್ ಮಾಸ್ಟರ್ ಕೊಲೆಯಾಗಿತ್ತು. ಇದಲ್ಲದೆ ಸರಗಳ್ಳತನ ಪ್ರಕರಣಗಳೂ ವರದಿಯಾಗಿದ್ದವು. ದೊಡ್ಡಪೇಟೆ, ಕೋಟೆ ,ಜಯನಗರ ಹಾಗೂ ತುಂಗಾನಗರ ಪೊಲಿಸ್ ಠಾಣೆ ವ್ಯಾಪ್ತಿಯ ಒಟ್ಟು ೧೫೬ ರೌಡಿಗಳನ್ನು ಕರೆಸಲಾಗಿತ್ತು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ, ಮತ್ತು ಒಂದು ಬ್ಲೇಡ್ ಇಟ್ಟುಕೊಂಡು ಓಡಾಡಿದರೂ, ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡುವುದಾಗಿ ಎಸ್ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.ಎಎಸ್ಪಿ ಶೇಖರ್, ಡಿವೈಎಸ್ಪಿ ಈಶ್ವರ್ ನಾಯ್ಕ್ ಹಾಗೂ ಸಿಪಿಐಗಳು ಹಾಜರಿದ್ದರು
previous post
next post