Malenadu Mitra
ಬೇಸಾಯ ರಾಜ್ಯ

ಕಾಡು ಹಂದಿ ಹೊಡಿಯಲು ಬಿಡಿ

ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ಸದನದಲ್ಲಿ ಮಲೆನಾಡು ಶಾಸಕರ ಒಕ್ಕೊರಲ ಧ್ವನಿ

ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಎಲ್ಲ ವನ್ಯಜೀವಿಗಳ ಹಾವಳಿ ರೈತರ ಬೆಳೆಗಳ ಮೇಲೆ ಆಗುತ್ತಿದೆ. ಅದರಲ್ಲೂ ಕಾಡು ಹಂದಿಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದುಸ್ತರವಾಗಿದೆ. ಸರಕಾರ ಕಾಡು ಹಂದಿ ಕೊಲ್ಲಲು ಅವಕಾಶ ಮಾಡಿಕೊಡಬೇಕು ಎಂದು ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಸರಕಾರವನ್ನು ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಹಾಲಪ್ಪ ಅವರು, ಮಲೆನಾಡಿನಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿ ಅತಿಯಾಗಿದೆ. ಅವುಗಳು ರೈತರ ಜಾನುವಾರುಗಳ ಮೇಲೆ ದಾಳಿ ಮಾಡಲು ಊರಿಗೇ ಬರುತ್ತಿವೆ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಕಾಡು ಹಂದಿಗಳು ಇಡೀ ತೋಟ ನಾಶ ಮಾಡಿರುವ ಚಿತ್ರಗಳು ಈ ಸಂಬಂಧ ಪತ್ರಿಕಾ ವರದಿಗಳು ನನ್ನ ಬಳಿ ಇವೆ. ಕಾರ್ಗಲ್ ಸಮೀಪ ಬೆಳೆ ಹಾನಿ ಮಾಡುತ್ತಿದ್ದ ಹಂದಿ ಸಾಯಿಸಿ  ಮಾಡಿದ ಅಡುಗೆ ಸಹಿತ ವಶಪಡಿಸಿಕೊಂಡ ಅರಣ್ಯ ಇಲಾಖೆ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿದೆ. ಹಂದಿ ಹೊಡೆಯಂಗಿಲ್ಲ ಅಂದ್ರೆ ಬೆಳೆ ಉಳಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರಲ್ಲದೆ, ಕೊಡಗಿನಲ್ಲಿ ಹಂದಿ ಸಾಯಿಸಲು ಕಾನೂನಿನ ಅವಕಾಶ ಮಾಡಿಕೊಡಲಾಗಿದೆ ಎಂದು ಕೇಳಿದ್ದೇನೆ ಶಿವಮೊಗ್ಗದಲ್ಲೂ ಅಂತಹ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಹಾಲಪ್ಪ ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ತೀರ್ಥಹಳ್ಳಿ ಶಾಸಕ ಆರಗಜ್ಞಾನೇಂದ್ರ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಅಪ್ಪಚ್ಚು ರಂಜನ್ ಅವರು ತಮ್ಮ ಭಾಗದಲ್ಲೂ ಕಾಡಾನೆ ಸೇರಿದಂತೆ ವನ್ಯ ಜೀವಿಗಳ ಹಾವಳಿ ಇದೆ ಎಂದು ಸದನದ ಗಮನ ಸೆಳೆದರು. ಸದಸ್ಯರ ಬೆಂಬಲಕ್ಕೆ ಬಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇದು ಬರೀ ಹಾಲಪ್ಪ ಕ್ಷೇತ್ರದ ಸಮಸ್ಯೆ ಅಲ್ಲ. ಇಡೀ ಮಲೆನಾಡಿನ ಸಮಸ್ಯೆ ಹಾಗಾಗಿ ಅರಣ್ಯ ಸಚಿವರು ಸೂಕ್ತ ಉತ್ತರ ನೀಡಬೇಕು. ಈ ಕುರಿತು ನನ್ನದೂ ಮನವಿ ಇದೆ ಎಂದು ಹೇಳಿದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು, ಕಾಡು ಪ್ರಾಣಿಗಳಿಂದ ಆಗುವ ಬೆಳೆ ಹಾಗೂ ಜೀವ ಹಾನಿಗೆ ಸೂಕ್ತ ಪರಿಹಾರ ಕೊಡುವ ವ್ಯವಸ್ಥೆ ಇಲಾಖೆಯಲ್ಲಿದೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೂ  ನಿರ್ದಿಷ್ಟ ಯೋಜನೆಗಳಿವೆ ಎಂದು ಹೇಳಿದರು. ಈ ವೇಳೆ ಮದ್ಯ ಪ್ರವೇಶ ಮಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು, ಬೆಳೆ ಹಾನಿ ಮತ್ತು ಜೀವ ಹಾನಿ ಆದ ವರ್ಷವೇ ಪರಿಹಾರ ಕೊಡಬೇಕು. ಆದರೆ ಇಲಾಖೆಯಲ್ಲಿ ಈ ಕ್ರಮ ಇಲ್ಲ ಎಂದು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು, ಇನ್ನು ಮುಂದೆ ಆಯಾ ವರ್ಷವೇ ಹಾನಿಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಧಿವೇಶನದ ಬಳಿಕ ಮಲೆನಾಡು ಭಾಗದ ಎಲ್ಲಾ ಶಾಸಕರ ಸಭೆ ಕರೆದು ಕಾಡು ಪ್ರಾಣಿಗಳ ಉಪಟಳ ನಿಯಂತ್ರಣದ ಬಗ್ಗೆ ಸಲಹೆ ಪಡೆಯಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.

Ad Widget

Related posts

ಫೆ. 12: ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ :ಸಂಸದ ರಾಘವೇಂದ್ರ ಹೇಳಿಕೆ

Malenadu Mirror Desk

ಹಿಂದುಳಿದ ವರ್ಗಕ್ಕೆ ಪ್ರಬಲ ಜಾತಿಗಳು ಬೇಡ

Malenadu Mirror Desk

ಕರ್ಕಿ ಗುರುರಾಜ್ ಸೈಬರ್ ಕಾಪ್ ಆಫ್ ಇಂಡಿಯಾ, ಹರಿಯಾಣದ ಗುರುಗ್ರಾಮದಲ್ಲಿ ಪ್ರಶಸ್ತಿ ಪ್ರದಾನ, ಸೂಪರ್ ಇನ್ವೆಸ್ಟಿಗೇಷನ್ ಗೆ ಸಂದ ಪುರಸ್ಕಾರ

Malenadu Mirror Desk

2 comments

Srinivasa February 9, 2021 at 5:55 pm

ಅಪ್ಪಣೆ ಇಲ್ಲದೆ ಸಾಕಷ್ಟು ತಿನ್ನುತಿದ್ದಾರೆ, ಇನ್ನು ಅಪ್ಪಣೆ ಕೊಟ್ಟರೆ ಸಂತತಿ ಉಳಿದ ಹಾಗೆ.

Reply
Malenadu Mirror Desk February 10, 2021 at 9:24 am

yes, ur right, thanks for coment sir

Reply

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.