ಅಹಿಂದ ವರ್ಗಕ್ಕೆ ಕಾಂಗ್ರೆಸ್ ಮೇಲೆ ನಂಬಿಕೆ ಇಲ್ಲ, ಈ ಕಾರಣದಿಂದ ಕುರುಬರ ಸಮಾವೇಶಕ್ಕೆ ಲಕ್ಷ-ಲಕ್ಷ ಜನರು ಬಂದಿರುವುದು ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸಹಕಾರ ಇಲ್ಲದಿದ್ದರೂ ಕುರುಬರು ಭಾರೀ ಸಂಖ್ಯೆಯಲ್ಲಿ ಬಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹಿಂದುಳಿದವರ ಬಗ್ಗೆ ಯಾರೂ ಮಾತನಾಡಬಾರದು. ತಾವು ಮಾತ್ರ ನಾಯಕ ಎಂಬ ಅಹಂ ಇದೆ. ಎಸ್ಟಿ ಮೀಸಲಾತಿಗೆ ಬೆಂಬಲ ಇದೇ ಎನ್ನುತ್ತಲೇ ಸಾಕಷ್ಟು ಅಡ್ಡಗಾಲು ಹಾಕಿದರು. ಕುರುಬರ ಒಗ್ಗಟ್ಟು ಒಡೆಯುತ್ತಾರೆ ಎಂದು ಹೇಳಿದರು. ಸಮಾಜದ ಸ್ವಾಮೀಜಿಗಳು ಸಮಾಜ ಕಟ್ಟುವವರು ಒಡೆಯುವುವರಲ್ಲ. ಈ ರೀತಿಯ ಹೇಳಿಕೆ ನೀಡುತ್ತಾ ಕುರುಬರ ಸಮಾವೇಶ, ಪಾದಯಾತ್ರೆ ವಿಫಲ ಮಾಡಲು ಯತ್ನಿಸಿದರು. ಆದರೆ ಜನರು ಅವರನ್ನು ಧಿಕ್ಕರಿಸಿ ಸಮಾವೇಶ್ ಯಶಸ್ವಿಗೊಳಿಸಿ ದಾಖಲೆ ನಿರ್ಮಿಸಿದರು. ಇದರಿಂದ ಹಿಂದುಳಿದವರು ಮತ್ತು ದಲಿತವರ್ಗದವರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಇಲ್ಲ ಎಂಬುದು ಗೊತ್ತಾಗಿದೆ. ಇಷ್ಟು ದಿನ ಮೋಸ ಹೋದ ಅವರು ನಮ್ಮೊಂದಿಗೆ ಬಂದಿದ್ದಾರೆ ಅವರಿಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಈಶ್ವರಪ್ಪ ಹೇಳಿದರು.
ನಾನು ಎಲ್ಲ ಹಿಂದುಳಿದ ವರ್ಗಗಳ ಪರ ಹೋರಾಡುತ್ತೇನೆ, ಬರೀ ಕುರುಬರ ನಾಯಕ ಅಲ್ಲ ಎಂದು ಉಪ್ಪಾರ ಸಮಾಜ, ಕೋಳಿ ಸಮಾಜ, ಸವಿತಾ ಸಮಾಜ ಹೀಗೆ ಅನೇಕ ಸಮಾಜದವರು ತಮ್ಮ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ಎಲ್ಲವುಗಳ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲಾಗುವುದು ಎಂದು ಈಶ್ವರಪ್ಪ ಹೇಳಿದರು. ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುವರ್ಣಶಂಕರ್ ಹಾಜರಿದ್ದರು.
previous post
next post