ಶಿವಮೊಗ್ಗದ ರೌಡಿಗಳು ಜೈಲಿಂದ ಹೊರಜಗತ್ತನ್ನು ಕಂಟ್ರೋಲ್ ಮಾಡುವುದು ಹೊಸದೇನು ಆಲ್ಲ, ಇಲ್ಲಿನ ಮರಳು, ಕ್ವಾರಿ,ಮೀಟರ್ ಬಡ್ಡಿ ಹಾಗೂ ಅಂಡರ್‌ವರ್ಲ್ಡ್ ಎಲ್ಲವನ್ನೂ ನಿಯಂತ್ರಿಸುತ್ತಿದ್ದುದು ಇತಿಹಾಸ. ಈಗ ಅಂತದೇ ಒಂದು ಪ್ರಕರಣದಲ್ಲಿ ರೌಡಿಶೀಟರ್ ದೀಪು ಅಲಿಯಾಸ್ ಡಿಂಗಾ ಪೊಲೀಸರ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾನೆ.
ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆ ಸಮೀಪದ ಡಿಂಗಾ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸುತ್ತುವರಿದಿದ್ದಾರೆ. ಈ ಸಂದರ್ಭ ಪೊಲೀಸರ ಮೇಲೆ ಮುಗಿಬಿದ್ದ ಡಿಂಗನ ಕಾಲಿಗೆ ತುಂಗಾನಗರ ಸಿಪಿಐ ದೀಪಕ್ ಫೈರ್ ಮಾಡಿದ್ದಾರೆ. ಗಾಯಗೊಂಡ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ರೌಡಿ ಬಚ್ಚ ಆಲಿಯಾಸ್ ಬಚ್ಚನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅಲ್ಲಿಂದಲೇ ತನ್ನ ಸಹಚರರ ಮೂಲಕ ಹಫ್ತಾ ವಸೂಲಿಗೆ ಮುಂದಾಗಿದ್ದಾನೆ. ಇದರ ಭಾಗವಾಗಿ ಟಿಪ್ಪುನಗರದ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟಗಾರರಾದ ಇಮ್ರಾನ್ ಮತ್ತು ಸೈಯದ್ ಸಹೋದರರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಹಚರರ ಮೂಲಕ ಬೆದರಿಕೆ ಹಾಕಿ ಹಣ ವಸೂಲಿಗೆ ಮುಂದಾಗಿದ್ದಾರೆ. ಹಣಕೊಡದಿದ್ದಾಗ ಹಲ್ಲೆ ಮಾಡಿದ್ದರು. ಈ ಬಗ್ಗೆ ಇಮ್ರಾನ್ ಸಹೋದರರು ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆನ್ನಲಾದ ಡಿಂಗಾನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಮೆಂಟಲ್ ಸೀನಾ ಹಾಗೂ ವೆಂಕಟೇಶ್ ಕೊಲೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಎಸ್‌ಪಿ ಶಾಂತರಾಜ್ ಭೇಟಿ ನೀಡಿದ್ದರು.
previous post
next post