ಶಿವಮೊಗ್ಗ ನಗರದ ಗೋಪಾಳ ರಂಗನಾಥ ಸ್ವಾಮಿ ಬಡಾವಣೆಯಲ್ಲಿ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಅಯ್ಯಪ್ಪ ಸ್ವಾಮಿಯ ನೂತನ ಪಂಚಲೋಹ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸ ಪ್ರತಿಷ್ಠಾಪನೆ ಮಹೋತ್ಸವ ಇಂದು ಮತ್ತು ನಾಳೆ ನಡೆಯಲಿದೆ.
ದೇವಸ್ಥಾನ ಆಡಳಿತಮಂಡಳಿ ಅಧ್ಯಕ್ಷ ಸುರೇಶ್ ಕೆ ಬಾಳೆಗುಂಡಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ದೇವಸ್ಥಾನವನ್ನು ೧.೨೦ ಕೋಟಿ ರೂ. ವೆಚ್ಚದಲ್ಲಿ ದಏಗುಲ ಅಭಿವೃದ್ಧಿ ಮಾಡಲಾಗಿದೆ. ಈ ಭಾಗದಲ್ಲಿ ಅಯ್ಯಪ್ಪ ಸ್ವಾಮಿಯ ಪಂಚಲೋಹ ವಿಗ್ರಹ ಅಪರೂಪವಾಗಿದೆ. ಐದು ಲಕ್ಷ ರೂ. ವೆಚ್ಚದಲ್ಲಿ ವಿಗ್ರಹ ಸಿದ್ದಪಡಿಸಿದೆ. ಮೊದಲ ದಿನ ಕೊಪ್ಪ ಗೌರಿಗದ್ದೆಯ ಅವಧೂತರಾದ ಶ್ರೀ ವಿನಯ್ ಗುರೂಜಿ ಅವರು ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಲಿದ್ದಾರೆ. ರವೀಂರಭಟ್ ಹಾಗೂ ಮಂಜುನಾಥ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ.೨೧ ರಂದು ಬೆಳಗ್ಗೆ ೧೧ ಕ್ಕೆ ಸಭಾ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಹಿರಿಯ ಗುರುಸ್ವಾಮಿ ರೋಜಾ ಷಣ್ಮುಗಂ, ಬಿಜೆಪಿ ಮುಖಂಡ ಎಸ್.ದತ್ತಾತ್ರಿ, ಪಾಲಿಕೆ ಸದಸ್ಯ ಮಂಜುನಾಥ್ ಮತ್ತಿರರು ಬಾಗವಹಿಸಲಿದ್ದಾರೆ ಎಂದು ಸುರೇಶ್ ಮಾಹಿತಿ ನೀಡಿದ್ದಾರೆ, ಬಿ.ಸಿರಾಜಣ್ಣ, ಗೋಪಾಲಕೃಷ್ಣ, ಸುರೇಶ್ ಬಾಬು, ರುದ್ರೇಗೌಡ ಮತ್ತಿತರರು ಇದ್ದರು.
previous post
next post