ಹುಟ್ಟುಗುಣ ಸುಟ್ಟರೂ ಬಿಡಲ್ಲ ಎಂಬ ಮಾತಿನಂತೆ ವರ್ಷ ಅರವತ್ತೇಳಾದರೂ ಮನೆ ಕಳ್ಳತನ ಮನಗಳ್ಳನನ್ನು ಬಂಧಿಸುವಲ್ಲಿ ಶಿವಮೊಗ್ಗದ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರಿನ ರಮೇಶ(67) ಬಂಧಿತ ಆರೋಪಿ. ಶಿವಮೊಗ್ಗನಗರದಲ್ಲಿ ನಡೆದಿದ್ದ ಎರಡು ಮನೆಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತನಿಂದ ೧೨ ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿನೋಬನಗರ ಸಿಪಿಐ ರವಿ ನೇತೃತ್ವದಲಲಿ ಪಿಎಸೈ ಕೋಮಲ, ಸಿಬ್ಬಂದಿಗಳಾದ ಸೋಮು ಕೆ, ಸುಧಾಕರ್, ಆದರ್ಶ,ಶಿವರಾಜ್‌ನಾಯಕ್, ರಾಮಕೃಷ್ಣ ರೋಷನ್ ಭಾಗವಹಿಸಿದ್ದರು.