Malenadu Mitra
ರಾಜ್ಯ

ಹಿಂದುಳಿದವರ ಅನ್ನ ಕಸಿದುಕೊಳ್ಳಬಾರದು: ಬ್ರಹ್ಮಾನಂದ ಸರಸ್ವತಿ

ಹಿಂದುಳಿದವರ ಹಕ್ಕನ್ನು ಯಾವುದೇ ರೀತಿಯಲ್ಲಿ ಕಸಿದುಕೊಳ್ಳಬಾರದು. ನಮ್ಮ ಅನ್ನದ ಬಟ್ಟಲನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಭಟ್ಕಳದ ಹಿಂದುಳಿದ ವರ್ಗಗಳ 2ಎ ಹಿತರಕ್ಷಣಾ ವೇದಿಕೆಯಿಂದ ಪಟ್ಟಣದ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನ ಎಂಬುದು ಭಗವಂತ ಇದ್ದ ಹಾಗೆ‌. ಸೃಷ್ಟಿ, ಸ್ಥಿತಿ, ಲಯ ಕಾಯ್ದುಕೊಳ್ಳುತ್ತದೆ. ಅದಕ್ಕೆ ಪೂರಕವಾಗಿ ಅಂಬೇಡ್ಕರರ ಸಂವಿಧಾನದ ಕಲಂ 14, 15 ತಾರತಮ್ಯ ಮಾಡಬಾರದು ಎಂದಿದೆ. ಕಲಂ 16ರಲ್ಲಿ ಬಡವರ,ಅತಿ ಹಿಂದುಳಿದವರು,ಅತ ಹಿಂದುಳಿದ ಪ್ರದೇಶದಲ್ಲಿರುವವರಿಗೆ ಅವರ ಹಕ್ಕನ್ನು ಕಾಯ್ದಿರಿಸಿಕೊಳ್ಳುವ ಅವಕಾಶ ನೀಡಿದೆ.ಅಲ್ಲದೇ ಆ ಹಕ್ಕನ್ನು ಸಂವಿಧಾನ ಕಾಯ್ದುಕೊಂಡು ಬಂದಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು, ನಾಯಕರು, ಸ್ವಾಮೀಜಿಗಳು ಅವರವರ ಜನರನ್ನು ಓಲೈಸಲು, ಸಂವಿಧಾನದ ಸಿದ್ಧಾಂತವನ್ನು, ಇತಿಮಿತಿಯನ್ನು ಗಾಳಿಗೆ ತೂರುವಂಥದ್ದಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು‌.

ಈ ಸಮಾವೇಶದ ಮೂಲಕ ಸರ್ಕಾರಕ್ಕೊಂದು ಸಂದೇಶ ನೀಡಲಿದ್ದೇವೆ‌. ಈಗ ಶಾಂತರೀತಿಯ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ಪ್ರತಿಫಲ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರತರ ಪ್ರತಿಭಟನೆ ನಡೆಸಲಾಗುವುದು. ಅವರವರ ಜಾತಿ, ಜನಾಂಗಗಳನ್ನು ಹೊಗಳಿಕೊಳ್ಳುವುದು ಆಯಾ ಸ್ವಾಮೀಜಿಗಳ, ನಾಯಕರಿಗೆ ಬಿಟ್ಟ ವಿಚಾರ. ನಾವು ಯಾವುದೇ ಹೊಸ ವಸ್ತುವನ್ನು ಕೇಳುತ್ತಿಲ್ಲ.ಬದಲಿಗೆ ಯಥಾಸ್ಥಿತಿಯನ್ನು ಸಂವಿಧಾನಬದ್ಧವಾಗಿ ಕಾಯ್ದುಕೊಳ್ಳಲು ಒತ್ತಾಯಿಸುತ್ತಿದ್ದೇವೆ ಎಂದರು‌.

ಮೀಸಲಾತಿ ನೀಡುವಿಕೆ ಅಷ್ಟೊಂದು ಸಣ್ಣ ವಿಚಾರವಲ್ಲ.ಅಧ್ಯಯನ ಮಾಡಬೇಕು, ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಬೇಕು. ಆದರೆ ಸಮುದಾಯಗಳು ಮನವಿ ಮಾಡಬಹುದು.ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒಂದುವೇಳೆ ಪಂಚಮಸಾಲಿಗಳನ್ನು 2ಎಗೆ ಸೇರಿಸಲು ಪ್ರಸ್ತಾವ ಸಲ್ಲಿಸಿದರೆ ಮುಂದೆ ತೀವ್ರತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Ad Widget

Related posts

ಕುಮಾರ್ ಬಂಗಾರಪ್ಪ ಮಗಳ ನಿಶ್ಚಿತಾರ್ಥ, ವರ ಯಾರು ಗೊತ್ತಾ ?

Malenadu Mirror Desk

ಈ ಬಾಲಕನ ಸಾವು ನ್ಯಾಯವೇ ದೇವಾ ?

Malenadu Mirror Desk

ಯುವ ವೈದ್ಯ ಆತ್ಮಹತ್ಯೆ, ಕಾರಣ ತಿಳಿದು ಬಂದಿಲ್ಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.